ಅ.24: ಅಡ್ಕಾರು ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ವತಿಯಿಂದ 5ನೇ ವರ್ಷದ ಶಾರದಾಂಬ ಉತ್ಸವ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ವತಿಯಿಂದ ಐದನೇ ವರ್ಷದ ಶ್ರೀ ಶಾರದಾಂಬ ಉತ್ಸವವು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಅ.23ರಂದು ಜರುಗಲಿದೆ.

ಬೆಳಿಗ್ಗೆ ಗಣಪತಿ ಹವನ, ಸಾಮೂಹಿಕ ಪ್ರಾರ್ಥನೆ, ಧ್ವಜಾರೋಹಣ, ಶ್ರೀ ಶಾರದಾಂಬ ದೇವಿಯ ಪ್ರತಿಷ್ಠೆ, ಉಪಹಾರ, ಬಾಲ ಸರಸ್ವತಿ ಹೋಮ, ಅಕ್ಷರಾಭ್ಯಾಸ, ಸಾಮೂಹಿಕ ಕುಂಕುಮಾರ್ಚನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಅಪರಾಹ್ನ ಧ್ವಜಾವತರಣದ ಬಳಿಕ ಶ್ರೀ ಶಾರದಾಂಬ ದೇವಿಯ ವೈಭವದ ಶೋಭಾಯಾತ್ರೆಯು ಸಿಂಗಾರಿಮೇಳ ಮತ್ತು ಭಜನೆಯೊಂದಿಗೆ ಹೊರಟು, ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳ್ಳಲಿದೆ.