ಅರಂತೋಡಿನಲ್ಲಿ ಹರಿಯಾಲಿ ಚಿಕನ್ & ಮಟನ್ ಸೆಂಟರ್ ಶುಭಾರಂಭ

0

ಹರಿಯಾಲಿ ಫಾರ್ಮ್ಸ್ ನ ಎನ್. ಪಿ ಧರ್ಮತೇಜರವರ ಮಾಲಕತ್ವದ ಹರಿಯಾಲಿ ಚಿಕನ್ & ಮಟನ್ ಸೆಂಟರ್ ಆರಂತೋಡಿನ ಯಶಸ್ವಿ ಕಾಂಪ್ಲೆಕ್ಸ್ ನಲ್ಲಿ ಅ. 27 ರಂದು ಉದ್ಘಾಟನೆಗೊಂಡಿತು.

ಶ್ರೀ ಮಂತ್ರ ದೇವತೆ ಸಾನಿಧ್ಯ ಅಮ್ಟೂರು ಇದರ ಧರ್ಮದರ್ಶಿಗಳಾದ ಮನೋಜ್ ಕಟ್ಟೆಮಾರುರವರು ದೀಪ ಬೆಳಗಿಸಿ ನೂತನ ಸಂಸ್ಥೆ ಉದ್ಘಾಟಿಸಿ ಶುಭ ಹಾರೈಸಿದರು.

ಧರ್ಮತೇಜರವರ ತಂದೆ, ಪ್ರಗತಿಪರ ಕೃಷಿಕ ನೂಜಾಲು ಪದ್ಮನಾಭ ಗೌಡ, ಮಾವ ಹಿರಿಯ ವಕೀಲ ಹಾಗೂ ಅಡ್ವಕೇಟ್ ರಾಮಣ್ಣ ಗೌಡ ದೇವರಮನೆ, ನಿವೃತ್ತ ಶಿಕ್ಷಕ ಅಳಿಕೆ ಜತ್ತಪ್ಪ ಮಾಸ್ಟರ್ ಮಾತನಾಡಿ ಶುಭ ಹಾರೈಸಿದರು.

ಇದೇ ಸಂದರ್ಭ ಸಂಸ್ಥೆಯ ವತಿಯಿಂದ ಧರ್ಮದರ್ಶಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಡ್ಕಾರ್ ಅಂಜನಾದ್ರಿ ವಾದ್ಯ ಕಲಾ ಸಂಘದವರಿಂದ ವಿಶೇಷ ಚೆಂಡೆ ವಾದನ ನಡೆಯಿತು.

ಮಾಲಕ ಎಂ.ಪಿ ಧರ್ಮತೇಜ ಮತ್ತು ಶ್ರೀಮತಿ ಡಾ. ಮಧುಮಿತ ಧರ್ಮತೇಜ ಎಲ್ಲರನ್ನು ಸ್ವಾಗತಿಸಿದರು.

ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಕಾರ್ಯಕ್ರಮ ನಿರೂಪಿಸಿದರು.

ಹರಿಯಾಲಿ ಚಿಕನ್ ಮತ್ತು ಮಟನ್ ಸೆಂಟರ್ ನಲ್ಲಿ ಮೊಟ್ಟೆ, ಬ್ರಾಯ್ಲರ್ ಕೋಳಿ, ಟೈಸನ್ ಕೋಳಿ , ನಾಟಿ ಕೋಳಿ ಮತ್ತು ಮಟನ್ ಮಾಂಸಗಳು ಮಿತ ದರದಲ್ಲಿ ದೊರೆಯುತ್ತದೆ. ಎಲ್ಲಾ ಸಭೆ ಸಮಾರಂಭಗಳಿಗೆ ಬೇಕಾದ ಮಾಂಸಗಳನ್ನು ಮಿತದರಲ್ಲಿ ಕೊಡಲಾಗುವುದು.
ಅಲ್ಲದೆ ಗಿರಿರಾಜ ಮತ್ತು ನಾಟಿ ಕೋಳಿ ಮರಿಗಳು ಮಾರಾಟ ವ್ಯವಸ್ಥೆ ಇದೆಯೆಂದು ಮಾಲಕರು ತಿಳಿಸಿದ್ದಾರೆ.