ಶಬರಿಮಲೆ ಯಾತ್ರೆ ಕೈಗೊಂಡ ಐವರು ಸಹೋದರಿಯರು

0

ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ದರ್ಶನ ಪಡೆಯಲು ಒಂದೇ ಮನೆಯ ಐದು ಮಂದಿ ಸಹೋದರಿಯರು
ಜತೆಯಾಗಿ ತೆರದ್ದಾರೆ.
ಮಂಡೆಕೋಲು ಗ್ರಾಮದ ಬೊಳುಗಲ್ಲು ಚೆನ್ನಪ್ಪ ಗೌಡ – ಗಂಗಮ್ಮ ದಂಪತಿಗಳ ಐವರು ಪುತ್ರಿಯರಾದ ಶ್ರೀಮತಿ ಯಶೋದಾ ಭರತ್ ಪೆರುಮುಂಡ, ಮಣಿಕ್ಕಾರ ಪ್ರೌಢಶಾಲಾ ಶಿಕ್ಷಕಿಯಾಗಿರುವ ಶ್ರೀಮತಿ ಮೀನಾಕ್ಷಿ ಸುರೇಶ್ ಕಟ್ಟಪುಣಿ, ನಿವೃತ್ತ ಶಿಕ್ಷಕಿ ಶ್ರೀಮತಿ ರುಕ್ಮಣಿ ಮಹಾಬಲ ಕುಳ, ಏನೆಕಲ್ಲು ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಚಂದ್ರಿಕಾ ಶಶಿಧರ ಪರಮಲೆ, ಅಮರಪಡ್ನೂರು ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ರೂಪವಾಣಿ ಶ್ರೀಧರ ಗೌಡ ಕೆರೆಮೂಲೆ ಜತೆಯಾಗಿ ಶಬರಿಮಲೆಯಾತ್ರೆ ಕೈಗೊಂಡಿದ್ದಾರೆ. ಅಡ್ಪಂಗಾಯದ ಶಿವಪ್ರಕಾಶ ಗುರುಸ್ವಾಮಿಗಳ ನೇತೃತ್ವದಲ್ಲಿ ಇತ್ತೀಚೆಗೆ ಶಬರಿಮಲೆ ಯಾತ್ರೆ ಕೈಗೊಂಡ ಸ್ವಾಮಿಗಳ ತಂಡದಲ್ಲಿ ಈ ಐದು ಮಂದಿ ಸಹೋದರಿಯರು ಕೂಡಾ ಇದ್ದರು.
“ಶಬರಿಮಲೆ ಪುಣ್ಯ ಕ್ಷೇತ್ರ ದರ್ಶನ ಮಾಡಬೇಕೆಂಬ ಆಸೆ ನಮ್ಮ ಎಲ್ಲ ಸಹೋದರಿಯರಿಗೆ ಇತ್ತು. ಆದ್ದರಿಂದ ಎಲ್ಲರೂ ವೃತಾಚರಣೆ ಕೈಗೊಂಡು ಗುರುಸ್ವಾಮಿಗಳ ಮಾರ್ಗದರ್ಶನದಲ್ಲಿ ಕ್ಷೇತ್ರಕ್ಕೆ ತೆರಳಿ ದರ್ಶನ ಪಡೆದಿzವೆ. ತುಂಬಾ ಖುಷಿಯಾಗಿದೆ” ಎಂದು ರೂಪವಾಣಿ ಶ್ರೀಧರ್ ಸುದ್ದಿಗೆ ತಿಳಿಸಿದ್ದಾರೆ.