ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಪರ್ಕದ ಆರೋಪ : ಯುವಕನ ವಿರುದ್ಧ ಪ್ರಕರಣ ದಾಖಲು

0

ಮದುವೆಯಾಗುವುದಾಗಿ ನಂಬಿಸಿ ಅಟೋ ಚಾಲಕನೋರ್ವ ಪಂಜದ ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದನೆಂಬ ಆರೋಪದಡಿಯಲ್ಲಿ ಆ ಯುವಕನ ಮೇಲೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾದ ಘಟನೆ ವರದಿಯಾಗಿದೆ.

ಪಂಜದ ಅಪ್ರಾಪ್ತ ಬಾಲಕಿಯನ್ನು ಆಟೋ ಚಾಲಕನೊಬ್ಬ ಪ್ರೀತಿಸುವುದಾಗಿ ಹೇಳಿ, ಲೈಂಗಿಕವಾಗಿ‌ ಬಳಸಿಕೊಂಡು ಬಳಿಕ ಆಕೆಯನ್ನು ನಿರಾಕರಿಸುತ್ತಿರುವುದಾಗಿ ವರದಿಯಾಗಿದೆ.
ಇದರಿಂದ ಮನನೊಂದ ಆ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಲಾಗಿದೆ.