ಗುತ್ತಿಗಾರಿನಲ್ಲಿ ರೋಯಲ್ ಬೇಕರಿ ನವೀಕೃತಗೊಂಡು ಶುಭಾರಂಭ

0

ಗುತ್ತಿಗಾರಿನ ಕೆಲಗಿನ‌ ಪೇಟೆಯ ಎಸ್.ಎಂ.ಎಸ್ .ಜಿ. ಕಾಂಪ್ಲೆಕ್ಸ್ ನಲ್ಲಿ ರೋಯಲ್ ಬೇಕರಿ ನ.2 ರಂದು ನವೀಕೃತಗೊಂಡು ಶುಭಾರಂಭಗೊಂಡಿತು.

ಬೆಳಗ್ಗೆ ಗಣಹವನ ನಡೆದಿದ್ದು ಬಳಿಕ ಬೇಕರಿ ಅಂಗಡಿಯನ್ನು ಮುಂದೆ ನೋಡಿಕೊಳ್ಳಲಿರುವ ಸುಕೇಶ್ ಚಾರ್ಮತ ರ ತಾಯಿ ಪೊನ್ನಕ್ಕ ಚಾರ್ಮತ, ತಂದೆ ಪದ್ಮಯ್ಯ ಚಾರ್ಮತ, ಸಹೋದರ ಗಿರೀಶ್ ಚಾರ್ಮತ ಅವರುಗಳು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭ ಸಂಸ್ಥೆಯ ಮಾಲಕ ಕುಟ್ಟಿ, ಸ್ಥಳೀಯರಾದ ಮುಳಿಯ ತಿಮ್ಮಪಯ್ಯ, ವೆಂಕಟ್ ವಳಲಂಬೆ, ವಿನೂಪ್ ಪಾಲ್ತಾಡು, ಸ್ವಾತಿ ಪಾಲ್ತಾಡು, ಯೋಗೀಶ್ ತಳೂರು, ಮೋಕ್ಷಿತ್ ಚತ್ರಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಉದಯ ಭಟ್ ಮತ್ತು ಗುರುಪ್ರಸಾಸ್ ಭಟ್ ಪೂಜಾ ಕಾರ್ಯಕ್ರಮ ನಿರ್ವಹಿಸಿದರು.

ಉತ್ತಮ ಗುಣಮಟ್ಟದ ಎಲ್ಲಾ ತರದ ಬೇಕರಿ ತಿಂಡಿ ತಿನಿಸುಗಳು ಲಭ್ಯವಿದ್ದು ಮದುವೆ, ಮತ್ತಿತರ ಸಮಾರಂಭಗಳಿಗೆ ಸೂಕ್ತ ಸಮಯದಲ್ಲಿ ಉತ್ತಮ ದರದಲ್ಲಿ ಬೇಕರಿ ತಿಂಡಿಗಳನ್ನು ಪೂರೈಕೆ ಮಾಡಲಾಗುವುದು. ಅಲ್ಲದೆ ಇಲ್ಲಿ ಎಲ್ಲಾ ಬಗೆಯ ಜ್ಯೂಸ್, ಚಾ, ಕಾಫಿ ತಿಂಡಿ ದೊರೆಯಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.