ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಮತ್ತು ಮಕ್ಕಳ ದಿನಾಚರಣೆ

0

ರಾಷ್ಟ್ರೀಯ ಗ್ರಂಥಾಲಯ ಸಪ್ರಾಹ ಕಾರ್ಯಕ್ರಮವು ನ.14 ರಂದು ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ನಡೆಯಿತು.
ಐತ್ತ ಪಾಟಾಜೆ ಹಿರಿಯ ಕಲಾವಿದರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಮಿತಾ ಎಲ್. ರೈಯವರು ಸಭಾಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಪ್ತಾಹದ ಮೊದಲ ದಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಇವರ ಜೀವನ ಮತ್ತು ಸಾಹಿತ್ಯಿಕ ಕೊಡುಗೆಗಳ ಬಗ್ಗೆ ರಾಮಕೃಷ್ಣ ಭಟ್ ಕೆ.ಪಿ. ನಿವೃತ್ತ ಶಿಕ್ಷಕರು ಉಪನ್ಯಾಸಗೈದರು. ಕಾರ್ಯಕ್ರಮದಲ್ಲಿ ಗ್ರಂಥಾಲಯ ಸಲಹಾಸಮಿತಿ ಸದಸ್ಯರು, ಸಂಜೀವಿನಿ ಒಕ್ಕೂಟ, ಸ್ನೇಹಿತರ ಕಲಾಸಂಘ, ಸ್ನೇಹಶ್ರೀ ಮಹಿಳಾ ಮಂಡಲ, ಒಡಿಯೂರು ಸಂಘದ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳು ಮತ್ತು ಓದುಗರು ಭಾಗವಹಿಸಿದರು.


ಪ್ರತೀಕ್ಷ ಹಾಗೂ ಹ೦ಸಿಕ ಪ್ರಾರ್ಥನೆ ಗೈದರು. ಸಂಜಯ್ ನೆಟ್ಟಾರು ಸ್ವಾಗತಿಸಿ, ನಿಶ್ಚಿತಾ ಕಾರ್ಯಕ್ರಮ ನಿರೂಪಿಸಿ ಗ್ರಂಥಾಲಯ ಮೇಲ್ವಿಚಾರಕಿ ಶಶಿಕಲಾ ವಂದಿಸಿದರು.