ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಗಡಿಪಾರು ಅಸ್ತ್ರ ಪ್ರಯೋಗಿಸಿದ ರಾಜ್ಯ ಸರಕಾರದ ವಿರುದ್ಧ ವಿ.ಹೆಚ್.ಪಿ ಅಧ್ಯಕ್ಷರಿಂದ ಖಂಡನೆ

0

ಹಿಂದೂ ಸಮಾಜದ ಒಳಿತಿಗಾಗಿ ಜಾಗೃತಿಗಾಗಿ ದುಡಿಯುವ ಕಾರ್ಯಕರ್ತರನ್ನು ಹಿಂದೂ ವಿರೋಧಿ ಸರ್ಕಾರ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಗಡಿಪಾರು ಮಾಡುವ ಅಸ್ತ್ರ ಬಳಸಿಕೊಂಡು ಕಾರ್ಯಕರ್ತರ ನೈತಿಕ ಆತ್ಮ ಸ್ಥೈರ್ಯವನ್ನು ಕುಗ್ಗಿಸುವ ಹುನ್ನಾರ ನಡೆಸುತ್ತಿದೆ.
ರಾಜ್ಯ ಸರಕಾರದ ಈ ಧೋರಣೆಯನ್ನು ವಿಶ್ವಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಖಂಡಿಸುತ್ತದೆ.


ಸಂಘಟನೆಯ ಕಾರ್ಯಕರ್ತರು ಗೋಮಾತೆಯ ರಕ್ಷಣೆ ಹಾಗೂ ಧರ್ಮದ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಅಂತಹ ಯುವಕರನ್ನು ಗುರಿಯಾಗಿಸಿಕೊಂಡು ಅವರ ಆತ್ಮಸ್ಥೈರ್ಯ ಕುಗ್ಗಿಸುವ ತಂತ್ರಕ್ಕೆ ಮುಂದಾಗಿರುವ
ರಾಜ್ಯ ಸರಕಾರಕ್ಕೆ
ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ.
ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆ ಕಾರ್ಯಕರ್ತರ ಜೊತೆಗೆ ಸದಾ ಬೆಂಬಲವಾಗಿ ನಿಲ್ಲುತ್ತದೆ. ಸರ್ಕಾರ ಈ ವಿಚಾರವನ್ನು ಇಲ್ಲಿಗೆ ಕೈಬಿಡಬೇಕು.
ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ನಡೆಸಲು ಹಿಂಜರಿಯುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ ತೀವ್ರವಾಗಿ ಖಂಡಿಸಿರುತ್ತಾರೆ.