ಚೆಂಬು : ವಿಷ ಸೇವಿಸಿ ಚಿಕಿತ್ಸೆ ಪಡೆಯಿತ್ತಿದ್ದ ಉದಯ ದೊಡ್ಕಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ

0


ಮನೆಯಲ್ಲಿ ವಿಷ ಸೇವಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆಂಬು ಗ್ರಾಮದ ದೊಡ್ಕಜೆ ಉದಯ ಅವರು ಚಿಕಿತ್ಸೆ ಫಲಕಾರಿಯಾಗದೆ, ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ನ.17ರಂದು‌ ಬೆಳಿಗ್ಗೆ ಸಂಭವಿಸಿದೆ.

ಚೆಂಬು ಗ್ರಾಮದ ದೊಡ್ಕಜೆ ಉದಯ ಅವರು ನ.16ರಂದು ರಾತ್ರಿ ಮನೆಯಲ್ಲಿ ವಿಷ ಸೇವಿಸಿದ್ದರು. ವಿಷಯ ತಿಳಿದ ಮನೆಯವರು ಕೂಡಲೇ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ರಾತ್ರಿಯೇ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ನ‌.17ರಂದು ಬೆಳಿಗ್ಗೆ ಅವರು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಉದಯ ಅವರು ವಿವಾಹಿತರಾಗಿದ್ದು, ಅವರಿಗೆ 38 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರುದ್ರಾಕ್ಷಿ, ಪುತ್ರ ಜಿತೇಶ್, ಪುತ್ರಿ ಪೂರ್ವಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.