ಮಡಿಕೇರಿ ತಾ‌. ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

0

ಚೆಂಬು ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ


ಮಡಿಕೇರಿಯಲ್ಲಿ ನ.11ರಂದು ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಚೆಂಬು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಿಂಚನ ಎಂ.ಎಲ್ ಜಾನಪದ ಗೀತೆಯಲ್ಲಿ ಪ್ರಥಮ ಬಹುಮಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ ಬಿಂದು .ಬಿ.ವಿ ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ, ವರ್ಷಿಣಿ .ಯು. ಎನ್. ಗಝಲ್ ನಲ್ಲಿ ದ್ವಿತೀಯ, ಅಂಜಲಿ ಕೆ.ಕೆ. ಇಂಗ್ಲಿಷ್ ಭಾಷಣದಲ್ಲಿ ತೃತೀಯ, ಸೌಜನ್ಯ ಪಿ. ಎಸ್. ಚಿತ್ರಕಲೆಯಲ್ಲಿ ತೃತೀಯ, ಅಕ್ಷಯ. ಜೆ ರಂಗೋಲಿ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ.

ತಂಡಗಳ ಸ್ಪರ್ಧೆಯಲ್ಲಿ ಜಾನಪದ ನೃತ್ಯ ಅರ್ಪಿತಾ ಮತ್ತು ತಂಡ ದ್ವಿತೀಯ, ರಸಪ್ರಶ್ನೆ ರಿತೇಶ್. ಟಿ. ಟಿ. ಮತ್ತು ತಂಡ ದ್ವಿತೀಯ ಸ್ಥಾನಗಳನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.