ಸುಳ್ಯದಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ : ಮಹಿಳಾ ತಂಡದಲ್ಲಿ ಕನ್ಯಾಕುಮಾರಿ ತಂಡವನ್ನು ಮಣಿಸಿ ಜಯಭೇರಿ ಬಾರಿಸಿದ ಟಿ ಎಂ ಸಿ ಥಾಣೆ ತಂಡ

0

ಸುಳ್ಯ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ,ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬ್ಬಡ್ಡಿ ಪಂದ್ಯಾಟ ಸಂಘಟನಾ ಸಮಿತಿ,ಆಶ್ರಯದಲ್ಲಿ ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಮೂರು ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ಕಬಡ್ಡಿ ಪಂದ್ಯಾಟದ ಮಹಿಳಾ ಕಬ್ಬಡಿ ಪಂದ್ಯಾಟದ ಪ್ರಥಮ ಪಂದ್ಯದಲ್ಲಿ ಟಿಎಂಸಿ ಥಾಣೆ ತಂಡವು ಕನ್ಯಾಕುಮಾರಿ ತಂಡವನ್ನು 56-11 ಅಂಕ ಗಳಿಂದ ಸುಲಭವಾಗಿ ಸೋಲಿಸಿ ಗೆಲುವು ತಮ್ಮದಾಗಿಸಿಕ್ಕೊಂಡಿತು.

ಸುಳ್ಯದ ಪ್ರಭು ಮೈದಾನದಲ್ಲಿ ಪಂದ್ಯಾಟ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಪಂದ್ಯಾಟವನ್ನು ವೀಕ್ಷಿಸಿದರು.

ಬಲಿಷ್ಠ ಥಾಣೆ ತಂಡಕ್ಕೆ ಯಾವುದೇ ಹೆಚ್ಚಿನ ಪ್ರತಿರೋಧ ತೋರಿಸದ ಕನ್ಯಾಕುಮಾರಿ ತಂಡವು ತಮ್ಮ ಸೋಲನ್ನು ಒಪ್ಪಿಕೊಂಡಿತು.