ಸುಳ್ಯದಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ :ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ ಟಿ ಎಂ ಸಿ ಥಾಣೆ

0


ರನ್ನರ್ ಆಫ್ ಪ್ರಶಸ್ತಿ ಪಡೆದ ನ್ಯಾಷನಲ್ ಬೆಂಗಳೂರು

ಮೂರನೇ ಸ್ಥಾನ ಕನ್ಯಾಕುಮಾರಿಗೆ, 4ನೇ ಸ್ಥಾನದಲ್ಲಿ ಪಾಂಡಿಚೇರಿ ತಂಡ

ಸುಳ್ಯದ ಪ್ರಭು ಗ್ರೌಂಡ್ ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಕೂಟದ ಮಹಿಳಾ ಕಬ್ಬಡಿ ಪಂದ್ಯಾಟದಲ್ಲಿ ಟಿಎಂಸಿ ಥಾಣೆ ತಂಡ ನ್ಯಾಷನಲ್ ಬೆಂಗಳೂರು ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಪಂದ್ಯಾಟದ ಕೊನೆಯ ಕ್ಷಣದವರೆಗೆ ಎರಡು ತಂಡಗಳ ನಡುವೆ ರೋಚಕ ಹಣಹಣಿ ನಡೆದು ಸಮಬಲದ ಹೋರಾಟ ನಡೆಯಿತು.

ಆದರೆ ಕೊನೆಯ ಕ್ಷಣದಲ್ಲಿ ಟಿಎಂಸಿ ಥಾಣೆ ತಂಡವು ಭರ್ಜರಿ ಪ್ರದರ್ಶನವನ್ನು 37-35 ಅಂಕಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕ್ಕೊಂಡಿತು.

ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು ಟಿ ಎಂ ಸಿ ಥಾಣೆ
ದ್ವಿತೀಯ ಸ್ಥಾನ ಪಡೆದು ರನ್ನರ್ ಆಫ್ ಪ್ರಶಸ್ತಿ ನ್ಯಾಷನಲ್ ಬೆಂಗಳೂರು ಪಡೆದು ಕೊಂಡರೆ ಮೂರನೇ ಸ್ಥಾನವನ್ನು ಕನ್ಯಾಕುಮಾರಿ ತಂಡ ಪಡೆದುಕೊಂಡು ಕೊನೆಯದಾಗಿ
4 ನೇ ಸ್ಥಾನದಲ್ಲಿ ಪಾಂಡಿಚೆರಿ ತಂಡ ಉಳಿಯಿತು.

ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ಬೆಸ್ಟ್ ರೈಡರ್ ಆಗಿ ಶ್ರೀ ಲಕ್ಷ್ಮಿ ನ್ಯಾಷನಲ್ ಬೆಂಗಳೂರು ತಂಡದ ಆಟಗಾರ್ತಿ ಪಡೆದುಕೊಂಡರೆ ಅದೇ ತಂಡದ ಮತ್ತೋರ್ವ ಆಟಗಾರ್ತಿ ಬೃಂದಾ ಬೆಸ್ಟ್ ಡಿಫೆಂಡರ್, ಆಲ್ ರೌಂಡರ್ ಆಗಿ ಟಿ ಎಂ ಸಿ ಥಾಣೆ ತಂಡದ ಆಟಗಾರ್ತಿ ಮಾಧುರಿ ಪ್ರಶಸ್ತಿಯನ್ನು ಪಡೆದುಕೊಂಡರು.

ಟಿಎಂಸಿ ತಂಡದಲ್ಲಿ ಮಾಧುರಿ ಹಾಗೂ ನಿಖಿತ ಉತ್ತಮ ರೈಡರ್ ಆಗಿ ತಂಡಕ್ಕೆ ಹೆಚ್ಚಿನ ಅಂಕವನ್ನು ಪಡೆದುಕೊಂಡರೆ, ನ್ಯಾಷನಲ್ ಬೆಂಗಳೂರು ತಂಡದಲ್ಲಿ ಲಕ್ಷ್ಮಿ ಮಿಂಚಿದರು.

ಸುಳ್ಯ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ,ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬ್ಬಡ್ಡಿ ಪಂದ್ಯಾಟ ಸಂಘಟನಾ ಸಮಿತಿ,ಆಶ್ರಯದಲ್ಲಿ ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಮೂರು ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ಕಬಡ್ಡಿ ಪಂದ್ಯಾಟದ ಮೂರನೆಯ ದಿನವಾದ ಇಂದು ಅದ್ದೂರಿ ತೆರೆ ಬೀಳಲಿದೆ.