ಸುಳ್ಯ :ರಾಷ್ಟ್ರೀಯ ಕಬಡ್ಡಿ ಪಂದ್ಯಾಟ

0

ಪುರುಷರ ಕ್ವಾಟರ್ ಫೈನಲ್ ಪಂದ್ಯದಲ್ಲಿ ಕಡಬ ತಂಡವನ್ನು ಸೋಲಿಸಿದ ಬ್ಯಾಂಕ್ ಆಫ್ ಬರೋಡ ಬೆಂಗಳೂರು ತಂಡ

ಸುಳ್ಯದಲ್ಲಿ ನಡೆಯುತ್ತಿರುವ ಪ್ರೋ ಮಾದರಿಯ ರಾಷ್ಟ್ರೀಯ ಮಟ್ಟದ ಮೂರು ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ಕಬಡ್ಡಿ ಪಂದ್ಯಾಟದ ಪುರುಷರ ಕಬ್ಬಡಿ ಪಂದ್ಯಾಟದ ಕ್ವಾಟರ್ ಫೈನಲ್ ಪಂದ್ಯದಲ್ಲಿ ಕಡಬ ತಂಡವನ್ನು ಬ್ಯಾಂಕ್ ಆಫ್ ಬರೋಡ ಬೆಂಗಳೂರು ತಂಡ ಸೋಲಿಸಿ ಸೆಮಿಫೈನಲ್ ಪಂದ್ಯಕ್ಕೆ ಪ್ರವೇಶಿಸಿದೆ.

ಬಾರಿ ಜಿದ್ದಾಜಿದ್ದಿನಿಂದ ಕೂಡಿದ ಈ ಪಂದ್ಯಾಟದಲ್ಲಿ ಪ್ರೊ ಕಬಡ್ಡಿ ಪಂದ್ಯಾಟದ ಖ್ಯಾತ ಆಟಗಾರರು ಬ್ಯಾಂಕ್ ಆಫ್ ಬರೋಡ ತಂಡದಲ್ಲಿದ್ದು ಸುಕೇಶ್ ಹೆಗ್ಡೆ ,ಸತೀಶ್,ರತನ್, ರೋಹಿತ್ ಮರ್ಲಾ, ಸುನಿಲ್ ಹನುಮಂತಪ್ಪ, ಸಚಿನ್ ಸುವರ್ಣ ಸೇರಿದಂತೆ ಬಲಿಷ್ಠ ಆಟಗಾರರು ಉತ್ತಮ ಪ್ರದರ್ಶನವನ್ನು ನೀಡಿದರು.

ಕಡಬ ತಂಡದಲ್ಲಿ ಉತ್ತಮ ರೈಡರುಗಳಾಗಿ ಗೋಗ್ಗು,ಬನಾರಿ, ಮಿಂಚಿದರೆ ಉತ್ತಮ ಡಿಫೆಂಡರ್ ಆಗಿ ನಾಸಿರ್ ಮಿಂಚಿನ ಆಟವನ್ನು ಆಡಿದರು.

ಕೊನೆಯದಾಗಿ ಬ್ಯಾಂಕ್ ಆಫ್ ಬರೋಡ ಬೆಂಗಳೂರು ತಂಡ 46-33 ಅಂಕಗಳಿಂದ ಕಡಬ ತಂಡವನ್ನು ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿತು.