ಆಲೆಟ್ಟಿ: ಕುಡೆಕಲ್ಲು ಭೂತಕಲ್ಲು ರಸ್ತೆಯಲ್ಲಿ ಬೀಡಾಡಿ ದನಗಳಿಂದ ಸಮಸ್ಯೆ- ಪಂಚಾಯತ್ ಅಧಿಕಾರಿಯವರಿಗೆ ದೂರು ನೀಡಿದ ನಾಗರಿಕರು

0

ಆಲೆಟ್ಟಿ ಗ್ರಾಮದ ಕುಡೆಕಲ್ಲು ಭೂತಕಲ್ಲು ಸಂಪರ್ಕದ ರಸ್ತೆಯಲ್ಲಿ ದಿನ ನಿತ್ಯ ಬೀಡಾಡಿ ದನಗಳು ಮಲಗಿಕೊಂಡಿರುವುದರಿಂದ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ.

ಈ ರಸ್ತೆಯಲ್ಲಿ ಕುಂಚಡ್ಕ ಬಾಳೆಬಲ್ಪು ಮೈಂದೂರು ಮುಂತಾದ ಕಡೆಗಳಿಗೆ ಸಂಪರ್ಕದ ರಸ್ತೆಯಾಗಿರುವುದರಿಂದ ಸಾಕಷ್ಟು ವಾಹನ ಸವಾರರು ಸಂಚರಿಸುವುದರಿಂದ ರಸ್ತೆಯ ಮಧ್ಯ ಭಾಗದಲ್ಲಿ ರಾತ್ರಿ ವೇಳೆಯಲ್ಲಿ ದನಗಳು ಮಲಗಿರುವ ಕಾರಣದಿಂದ ಆಗಾಗ ಅಫಘಾತ ಸಂಭವಿಸಿವು ದು ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿದೆ. ಸಾಕು ಪ್ರಾಣಿಗಳನ್ನು ಸಾರ್ವಜನಿಕ ವಲಯದಲ್ಲಿ ಬಿಟ್ಟು ತೊಂದರೆ ಕೊಡುವುದು ಸರಿಯಲ್ಲ. ಈ ಬಗ್ಗೆ ಸಂಬಂಧಿಸಿದ ವಾರಸುದಾರರಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳುವಂತೆ ಈ ಭಾಗದ ನಾಗರಿಕರು ಆಲೆಟ್ಟಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಸಲ್ಲಿಸಿದರು.