ಡಿ.2 : ಕಾವು ಬುಶ್ರಾ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ

0


ಪುತ್ತೂರು ತಾಲೂಕಿನ ಕಾವು ಬುಶ್ರಾ ವಿದ್ಯಾಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಡಿ. 2 ರಂದು ಅಪರಾಹ್ನ 3.3೦ರಿಂದ ನಡೆಯಲಿದೆ. ಗ್ರಾಮೀಣ ಪ್ರದೇಶವಾದ ಕಾವಿನಲ್ಲಿ ಸ್ಥಾಪಿತಗೊಂಡ ಬುಶ್ರಾ ವಿದ್ಯಾಸಂಸ್ಥೆಯು 25 ವರ್ಷದ ಸಂಭ್ರಮದಲ್ಲಿದ್ದು, ಡಿ. 29 ಮತ್ತು 30 ರಂದು ಶಾಲಾ ಬೆಳ್ಳಿ ಹಬ್ಬ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಡಿ. 2ರಂದು ಶಾಲಾ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅಪರಾಹ್ನ 3.3೦ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿದೆ.

ವಿಶೇಷ ಆಕರ್ಷಣೆಯಾಗಿ ವೀಕ್ಷಿತ್ ಕುತ್ಯಾಳ ಮತ್ತು ಬಳಗದವರಿಂದ ಕೊಳಲು ವಾದನ ನಡೆಯಲಿದೆ. ಸಮ್ಮಿಲನ ಕಾರ್ಯಕ್ರಮದಲ್ಲಿ ಭಾವಗಹಿಸುವ ಹಿರಿಯ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಹಾಗೂ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವರ್ಷವನ್ನು ಈ ಮೊಬೈಲ್ ಸಂಖ್ಯೆ (8147453575) ವಾಟ್ಸಾಪ್ ಮೂಲಕ ನ. 3೦ರ ಒಳಗೆ ತಿಳಿಸಬೇಕೆಂದು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶ್ವಿತ್ ಕಾಳಂಮನೆ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.