ಬೆಂಗಳೂರಿನ ಸಿಸ್ಕೋ ಸಂಸ್ಥೆಯಿಂದ ಸುಳ್ಯದಲ್ಲಿ ಶೈಕ್ಷಣಿಕ ಚಟುವಟಿಕೆ ಕಾರ್ಯಕ್ರಮ

0

ಬೆಂಗಳೂರಿನ ಸಿಸ್ಕೋ (Cisco) ಸಂಸ್ಥೆಯಿಂದ 52 ಉದ್ಯೋಗಿಗಳು ರೈಟ್ ಟು ಲಿವ್ ಕೋಟೆ ಫೌಂಡೇಶನ್ ಸಹಭಾಗಿತ್ವದಲ್ಲಿ ಸುಳ್ಯದಲ್ಲಿ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಚಟುವಟಿಕೆ, ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದರು. ಕ್ಯಾರಿಯರ್ ಗೈಡೆನ್ಸ್, ವಿಜ್ಞಾನ ಪ್ರಯೋಗ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಕ್ರೀಡಾಂಗಣದಲ್ಲಿ ಸ್ಪರ್ಧೆ ಮತ್ತು ಮನೋರಂಜನ ಕಾರ್ಯಕ್ರಮ ಗಳನ್ನು ನಡೆಸಿ ಕೊಟ್ಟರು. ವೃತ್ತಿ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು. ಶೌಚಾಲಯದ ಗೋಡೆ ಗಳಿಗೆ ಬಣ್ಣ ಬಳಿದು ಸುಂದರ ಗೊಳಿಸಿದರು.

ಈ ಕಾರ್ಯಕ್ರಮಗಳನ್ನು ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ, ಸರ್ಕಾರಿ ಪ್ರೌಢಶಾಲೆ ಸುಳ್ಯ, ಕಿರಿಯ ಪ್ರಾಥಮಿಕ ಶಾಲೆ ಅಚ್ರಪಾಡಿ, ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ಸಿಸ್ಕೋ ಟೀಮ್ ನ ಸಂಪತ್ ಬಂನಂದ, ವಿಷ್ಣುಕಿರಣ್ ಬಜ್ಪೆ, ರೈಟ್ ಟು ಲಿವ್ ಕೋಟೆ ಫೌಂಡೇಶನ್ ಪರವಾಗಿ ವೀರೇಶ್ ಸೊಂಡೆ, ಪ್ರದೀಪ್ ಉಬರಡ್ಕ, ಜಯಂತ್, ಸ್ನೇಹ ಸೊಂಡೆ ಉಪಸ್ಥಿತರಿದ್ದರು.