ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮ್ಯಾನೇಜರ್ ಎಂ. ಕೃಷ್ಣರಿಗೆ ಬೀಳ್ಕೊಡುಗೆ

0

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದಲ್ಲಿ ಕಳೆದ 41 ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ನೌಕರರಾಗಿ ಸೇವೆ ಸಲ್ಲಿಸಿ ನ. 30 ರಂದು ವಯೋ ನಿವೃತ್ತಿ ಹೊಂದಿದ ಎಂ. ಕೃಷ್ಣರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನ. 30ರಂದು ಸಂಘದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ವಹಿಸಿ ಶುಭ ಹಾರೈಸಿದರು. ಸಂಘದ ಮಾಜಿ ಅಧ್ಯಕ್ಷ ಸತ್ಯನಾರಾಯಣ ಕೋಟೆ ನಿವೃತ್ತರನ್ನು ಸನ್ಮಾನಿಸಿ ಶುಭ ಹಾರೈಸಿದರು. ಕುಕ್ಕುಜಡ್ಕ ಪ್ರಾಥಮಿಕ ಕೃ.ಪ.ಸ.ಸಂಘದ ಅಧ್ಯಕ್ಷ ಕೇಶವ ಕರ್ಮಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಜಿ ನಿರ್ದೇಶಕ ಪದ್ಮನಾಭ ರೈ, ಸಂಘದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ಮತ್ತು ನಿವೃತ್ತರಾದ ಕೃಷ್ಣ ಎಂ ಮತ್ತು ಅವರ ಪತ್ನಿ ಶ್ರೀಮತಿ ರೇಖಾ ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಬಿ. ಸುಭಾಶ್ಚಂದ್ರ ರೈ ಸ್ವಾಗತಿಸಿ, ಉಪಾಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು ವಂದಿಸಿದರು. ಸಂಘದ ನಿರ್ದೇಶಕರಾದ ಅಜಿತ್ ರಾವ್, ಸುಬ್ರಹ್ಮಣ್ಯ ಕೆ.ಎಲ್, ಎನ್‌. ವಿಶ್ವನಾಥ ರೈ, ಸಿಬ್ಬಂದಿಗಳಾದ ಕುಸುಮಾಧರ, ಉಮೇಶ್ ಪಿ, ಭಾಸ್ಕರ ಶೇಣಿ, ಗೀತಾಶ್ರೀ, ಸದಸ್ಯರಾದ ಪ್ರಭಾಕರ ಆಳ್ವ, ಈಶ್ವರ ವಾರಣಾಶಿ, ರುಕ್ಮಯ್ಯ ಗೌಡ ನಿವೃತ್ತರಿಗೆ ಶುಭ ಹಾರೈಸಿದರು.
ಸಂಘದ ನಿರ್ದೇಶಕರು, ಸಿಬ್ಬಂದಿಗಳು, ಸದಸ್ಯರು, ಕೃಷ್ಣರ ಅಭಿಮಾನಿಗಳು, ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಾಳಿಲ ಶಾಖೆಯ ನೂತನ ಜಿನಸು ವಿಭಾಗದ ಉದ್ಘಾಟನೆಯ ಆಮಂತ್ರಣ ಪತ್ರ ಬಿಡುಗಡೆ

ಸಂಘದ ಬಾಳಿಲ ಶಾಖೆಯ ಜಿನಸು ವಿಭಾಗದ ನೂತನ ಕಟ್ಟಡದ ಉದ್ಘಾಟನೆ ಡಿ. 14ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನ. 30ರಂದು ಸಂಘದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು, ಉಪಾಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು, ನಿರ್ದೇಶಕರಾದ ಅಜಿತ್ ರಾವ್ ಕಿಲಂಗೋಡಿ, ಕೆ.ಎಲ್. ಸುಬ್ರಹ್ಮಣ್ಯ ಕಾವಿನಮೂಲೆ, ಎನ್. ವಿಶ್ವನಾಥ ರೈ, ಬಿ. ಸುಭಾಶ್ಚಂದ್ರ ರೈ, ಮೇದಪ್ಪ ಗೌಡ ತಂಟೆಪ್ಪಾಡಿ, ಭಾರತೀಶಂಕರ ಆದಳ, ಶುಭಕುಮಾರ್ ಬಾಳೆಗುಡ್ಡೆ, ಶ್ರೀಮತಿ ಪುಷ್ಪಾವತಿ ಬಾಳಿಲ, ಶ್ರೀಮತಿ ಮಾಲಿನಿ ಪ್ರಸಾದ್, ಶ್ರೀಮತಿ ಪಂಕಜಾಕ್ಷಿ ಮಡ್ತಿಲ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.