ಅರಂಬೂರು ಪಯಸ್ವಿನಿ ನದಿಯಲ್ಲಿ ಮುಳುಗಿ ಮೃತ ಪಟ್ಟ ವ್ಯಕ್ತಿಯ ಶವ ಪತ್ತೆ

0

ಅರಂಬೂರು ಸೇತುವೆ ಬಳಿ ಪಯಸ್ವಿನಿ ನದಿಯಲ್ಲಿ ‌ಸ್ನಾನಕ್ಕೆಂದು ತೆರಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ಇಂದು ಮಧ್ಯಾಹ್ನ ವರದಿಯಾಗಿದೆ.
ಮೃತಪಟ್ಟ ವ್ಯಕ್ತಿ ಮಡಿಕೇರಿ ಮದೆನಾಡು ಮೂಲದ ವೆಂಕಟ್ರಮಣ (65) ಎಂದು ಗುರುತಿಸಲಾಗಿದೆ.

ಅರಂಬೂರು ಎಂಬಲ್ಲಿ
ತನ್ನ ಸಂಬಂಧಿಕರ ಮನೆಗೆಂದು ಬಂದ ವ್ಯಕ್ತಿ ಭಜನಾ ಮಂದಿರದ ಬಳಿಯ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದರು. ಅದೇ ಸಮಯದಲ್ಲಿ ‌ಭಜನಾ ಮಂದಿರದಿಂದ ಅಯ್ಯಪ್ಪ ವೃತಧಾರಿಗಳು ಸ್ನಾನಕ್ಕೆಂದು ಬರುವ ಸಂದರ್ಭದಲ್ಲಿ ವ್ಯಕ್ತಿ ಮುಳುಗಿರುವುದನ್ನು ಗಮನಿಸಿ ವಿಷಯ ತಿಳಿಸಿದರು. ಸ್ಥಳೀಯ
ಪಂಚಾಯತ್ ಸದಸ್ಯ ಸುಧೇಶ್ ಅರಂಬೂರು ರವರು ಸುಳ್ಯ ಪೋಲೀಸರಿಗೆ ಹಾಗೂ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರು ಬೋಟ್ ಬಳಸಿ ಸುಮಾರು ಎರಡುವರೆ ಗಂಟೆಗಳ ಕಾಲ ಹುಡುಕಾಟ ನಡೆಸಿದರು ಶವ ಪತ್ತೆಯಾಗಿರಲಿಲ್ಲ. ಬಳಿಕ ಪೈಚಾರಿನ ಮುಳುಗು ತಜ್ಞರಾದ ಆರ್.ಬಿ.ಬಶೀರ್, ಅಬ್ಬಾಸ್ ಶಾಂತಿನಗರ, ಲತೀಫ್ ಬೊಳುಬೈಲು,ಶಿಯಾಬ್, ಲತೀಫ್ ಟಿ.ಎ ರವರ ತಂಡ ಆಗಮಿಸಿ ನದಿಯಲ್ಲಿ ಮುಳುಗಿ ಶವದ ಪತ್ತೆ ಕಾರ್ಯ ಮಾಡಿದರು.

ಮೃತರು ವೆಂಕಟ್ರಮಣ ಮೂಲ್ಯ, ಪತ್ನಿ ಶ್ರೀಮತಿ ಶಾಂತಿ, ಪುತ್ರ ಅನಿಲ್ ಕುಮಾರ್, ಶ್ರೀಮತಿ ಅನಿತಾ ಮಹೇಶ್ ಹಾಗೂ ಸಹೋದರ ಬಾಲಕೃಷ್ಣ, ಸಹೋದರಿ ಜಾನಕಿ, ಶಾರದ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.