ತೀರ್ಥರಾಮ ಆಚಾರ್ಯ ಕುಕ್ಕಂದೂರು ನಿಧನ

0

ಜಾಲ್ಸೂರು ಗ್ರಾಮದ ಕುಕ್ಕಂದೂರು ತೀರ್ಥರಾಮ ಆಚಾರ್ಯರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.1ರಂದು ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.
ತೀರ್ಥರಾಮ ಆಚಾರ್ಯ ಅವರು ಕೆ.ಎಫ್.ಡಿ.ಸಿ. ಇಲಾಖೆಯಲ್ಲಿ ಸೂಪರ್‌ವೈಸರ್ ಆಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ಮೃತರು ಪತ್ನಿ ಪಾರ್ವತಿ, ಪುತ್ರಿಯರಾದ ಸೀಮಾ, ಸೌಮ್ಯ, ಶಿಲ್ಪಾ, ಪುತ್ರ ಚಂದ್ರಹಾಸ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.