ರಂಗಮಯೂರಿಯಲ್ಲಿ ಸುಳ್ಯ ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2 ಡ್ಯಾನ್ಸ್ ಸ್ಪರ್ಧೆಗೆ ಚಾಲನೆ

0


ಸಿಗ್ನೇಚರ್ ಡ್ಯಾನ್ಸ್ ಕಂಪೆನಿ, ಸುದ್ದಿ ಮೀಡಿಯಾ ಸಹಯೋಗ


ರಂಗಮಯೂರಿ ಕಲಾಶಾಲೆ ಸುಳ್ಯ, ಸಿಗ್ನೇಚರ್ ಡ್ಯಾನ್ಸ್ ಕಂಪೆನಿ ಮೈಸೂರು ಮತ್ತು ಸುದ್ದಿ ಮೀಡಿಯಾ ಸಹಯೋಗದಲ್ಲಿ ಸುಳ್ಯ ತಾಲೂಕಿನ ಪ್ರತಿಭೆಗಳಿಗಾಗಿ ಸುಳ್ಯ ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2 ಸೋಲೋ ಡ್ಯಾನ್ಸ್ ಸ್ಪರ್ಧೆ ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಆರಂಭಗೊಂಡಿದೆ.


ಸುದ್ದಿ ಸಮೂಹ ಸಂಸ್ಥೆಗಳ ಮಾಲಕ ಹಾಗೂ ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದರವರು ಸ್ಪರ್ಧೆಯನ್ನು ಉದ್ಘಾಟಿಸಿದರು.
ಸೋಲಿನಿಂದ ಪಾಠ ಕಲಿತು ಗೆಲ್ಲುವುದು ಬದುಕಿನ ಅಪೂರ್ವವಾದ ಕಲೆ. ಇಂತಹ ಸಾಂಸ್ಕೃತಿಕ ಸಂಗತಿಗಳು ಮನುಷ್ಯ ಬದುಕಿನ ಜೀವ ಸೆಲೆ ಎಂದು ಡಾ.ಯು.ಪಿ.ಶಿವಾನಂದ ಹೇಳಿದರು.


ಮುಖ್ಯ ಅತಿಥಿಗಳಾಗಿದ್ದ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್‌ಕುಮಾರ್ ಕಮ್ಮಾಜೆ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅರಿತು ಪ್ರೋತ್ಸಾಹಿಸಿ ಬೆಳೆಸುವುದು ಪೋಷಕರ ಜವಾಬ್ದಾರಿ. ಆರ್ಥಿಕ ಸದೃಢತೆಯ ಜೊತೆಗೆ ಸಾಂಸ್ಕೃತಿಕ ಜವಾಬ್ದಾರಿ ಬೇಕು. ನಮ್ಮ ಸಾಧನೆಯನ್ನು ನಮ್ಮಲ್ಲಿಯೇ ಬಳಕೆ ಮಾಡುವ ಮೂಲಕ ಬೆಳೆಯಬೇಕು ಎಂದು ಹೇಳಿದರು.


ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಗಿರೀಶ್ ನಾರ್ಕೋಡು, ಭರತನಾಟ್ಯ ಶಿಕ್ಷಕಿ ವಿದುಷಿ ಇಂದುಮತಿ ನಾಗೇಶ್, ಮೈಸೂರಿನ ಸಿಗ್ನೇಚರ್ ಡ್ಯಾನ್ಸ್ ಕಂಪೆನಿಯ ಅಧ್ಯಕ್ಷ ವಿನೋದ್ ಕರ್ಕೇರ, ನಿವೃತ್ತ ಪೊಲೀಸ್ ಉಪನಿರೀಕ್ಷಕ ನಾರಾಯಣ ಪುತ್ತಿಲ, ಉದ್ಯಮಿ ಚಿದಾನಂದ ವಿದ್ಯಾನಗರ ಮುಖ್ಯ ಅತಿಥಿಗಳಾಗಿದ್ದರು.
ರಂಗಮಯೂರಿ ಪೋಷಕರ ಬಳಗದ ಶ್ರೀಮತಿ ಮಧುರಾ ಜಗದೀಶ್ ಸ್ವಾಗತಿಸಿ, ಭವಾನಿಶಂಕರ ಅಡ್ತಲೆ ಪ್ರಸ್ತಾವನೆಗೈದರು. ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಂಗಮಯೂರಿ ನಿರ್ದೇಶಕ ಲೋಕೇಶ್ ಊರುಬೈಲು ವಂದಿಸಿದರು.