ಕಲ್ಚರ್ಪೆ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ದೈವಸ್ಥಾನದ ಪರಿಸರದಲ್ಲಿ ಸ್ಥಳೀಯರಿಂದ ಶ್ರಮದಾನ

0

ಕಲ್ಚರ್ಪೆ ಸಿರಿ ಕುರಲ್ ನಗರ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ದೈವಸ್ಥಾನದ ಪರಿಸರದಲ್ಲಿ ಇಂದು ಸ್ವಚ್ಛತಾ ಶ್ರಮದಾನ ಕಾರ್ಯ ನಡೆಯಿತು.

ಡಿಸೆಂಬರ್ ೧೨ರಂದು ನಡೆಯಲಿರುವ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಗುಳಿಗ ದೈವದ ನೇಮೋತ್ಸವದ ಕಾರ್ಯಕ್ರಮದ ಅಂಗವಾಗಿ ಇಂದು ಸ್ಥಳೀಯ ನಿವಾಸಿಗಳು ಮತ್ತು ಸಮಿತಿಯ ಪದಾಧಿಕಾರಿಗಳು ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿ ಪರಿಸರ ಸ್ವಚ್ಛತೆಯವನ್ನು ಮಾಡಿದರು.