ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸೈಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿ ಅಭಿರಾಮ್ ತೃತೀಯ

0

ಶ್ರೀ ರಾಮಕೃಷ್ಣ ಆಶ್ರಮ ಮೈಸೂರು ಇದರ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ಸ್ವಾಮಿ ಶಾಂಭವನಂದಾಜಿ ಮೆಮೋರಿಯಲ್ ನ ಹಿರಿಯ ವಿದ್ಯಾರ್ಥಿ ಸಂಘದವರು ನಡೆಸುತ್ತಿರುವ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ
ಸೈಂಟ್ ಜೋಸೆಫ್ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಅಭಿರಾಮ್. ಬಿ. ತೃತೀಯ ಸ್ಥಾನ ಗಳಿಸಿರುತ್ತಾರೆ.

ಇವರು ಅಜ್ಜಾವರ ಸ.ಹಿ.ಪ್ರಾ ಶಾಲೆ ಶಿಕ್ಷಕ ವೆಂಕಟರಾಜ ಕಲ್ಲುರಾಯ ಮತ್ತು ಜಟ್ಟಿಪಳ್ಳ ಸ.ಹಿ.ಪ್ರಾ ಶಾಲೆ ಸುವರ್ಣಲತಾ ಪಿ. ಅರ್ ದಂಪತಿಗಳ ಪುತ್ರ.