ಕುದ್ಮಾರು : ಶಾಲಾ ಬಸ್ಸಿಗೆ ಕಾರು ಡಿಕ್ಕಿ – ವಿದ್ಯಾರ್ಥಿಗಳಿಗೆ ಗಾಯ

0

ಕುದ್ಮಾರಿನ ಚಾಪಳ್ಳ ತಿರುವಿನಲ್ಲಿ ಶಾಲಾ ಮಕ್ಕಳ ಬಸ್ಸಿಗೆ ಕಾರು ಡಿಕ್ಕಿಯಾಗಿ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಡಿ.6 ರಂದು ನಡೆದಿದೆ.
ಕಳಂಜದಿಂದ ಮಕ್ಕಳನ್ನು ಕರೆದುಕೊಂಡು ಹೋಗುವ ಬಸ್ಸು (KA 21 B 8667 )ಕುದ್ಮಾರು ಗ್ರಾಮದ ಚಾಪಳ್ಳ ತಿರುವು ಬಳಿ ತಲುಪಿದಾಗ, ಎದುರಿನಿಂದ ಬಂದ (KL24B-0025) ನೋಂದಣಿಯ ಬಾಬು ಎಂಬವರು ಚಲಾಯಿಸುತ್ತಿದ್ದ ಕಾರು ಶಾಲಾ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಕ್ಕಳನ್ನು ಚಿಕಿತ್ಸೆಗಾಗಿ ಕಾಣಿಯೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಬಸ್ಸಿಗೂ ಹಾನಿಯಾಗಿದ್ದುಈ ಬಗ್ಗೆ ಬಸ್ಸು ಚಾಲಕ ಸುಲೈಮಾನ್ ಎಂಬವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ- 83/2023 ಕಲಂ 279,337 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.