ಡಿ.17 ರಿಂದ ಜ.14 : ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುಪೂಜೆ

0

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.17 ರಿಂದ ಜ.14 ರವರೆಗೆ ಧನುಪೂಜೆ ನಡೆಯಲಿದೆ. ಪ್ರತೀ ದಿನ ಬೆಳಿಗ್ಗೆ ಗಂಟೆ 5.15 ಕ್ಕೆ ಸರಿಯಾಗಿ ಧನುಪೂಜೆ ನಡೆಯಲಿದ್ದು ಪೂಜೆ ಮಾಡಿಸುವ ಭಕ್ತಾದಿಗಳು ದೇವಾಲಯದ ಕಚೇರಿಯಿಂದ ಮೊದಲ ದಿನವೇ ರೂ.250 ಪಾವತಿಸಿ ರಶೀದಿ ಪಡೆದು ಸಮಯಕ್ಕೆ ಸರಿಯಾಗಿ ಹಾಜರಿರಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ತಿಳಿಸಿದ್ದಾರೆ.