ಪೂರ್ಣಿಮಾ ತೋಟಪ್ಪಾಡಿಯವರಿಗೆ ಚಂದನ ರಾಜ್ಯೋತ್ಸವ ಪ್ರಶಸ್ತಿ 2023

0

ಕರ್ನಾಟಕ ಸುವರ್ಣ ಸಂಭ್ರಮ – 50 ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸುಳ್ಯ ಚಂದನ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ನ. 26ರಂದು ಸುಳ್ಯ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪೆರ್ಲಂಪಾಡಿ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ತೋಟಪ್ಪಾಡಿಯವರಿಗೆ 2023ನೇ ಸಾಲಿನ ಚಂದನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರಭಾಕರ ಕಲ್ಲೂರಾಯ, ಎಂ. ವೆಂಕಪ್ಪ ಗೌಡ, ಹಾ.ಮ. ಸತೀಶ್ ಬೆಂಗಳೂರು, ಎಚ್. ಭೀಮರಾವ್ ವಾಷ್ಠರ್, ಪೆರುಮಾಳ್ ಲಕ್ಷ್ಮಣ ಐವರ್ನಾಡು, ಎಸ್.ಐ. ಈರಯ್ಯ ದೂಂತೂರು, ನಿವೃತ್ತ ಕೃಷಿ ಅಧಿಕಾರಿ ಮೋಹನ್ ನಂಗಾರು, ಸುಳ್ಯ ವೆಂಕಟ್ರಮಣ ಸೊಸೈಟಿ ಸೀನಿಯರ್ ಮ್ಯಾನೇಜರ್ ಡಾ. ಕೆ.ಟಿ. ವಿಶ್ವನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ನಾಡಿನ ನೆಲ, ಜಲ ಸಂರಕ್ಷಣೆ, ಸಾಹಿತ್ಯ ಲೋಕದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.