ಚೆಂಬು ಶ್ರೀ ಉಳ್ಳಾಕುಲು ದೈವಸ್ಥಾನದ ಚಾಂಬಾಡು ಕಿರು ಚಾವಡಿಯಲ್ಲಿ ಜಾಳ್ತೆ ನೇಮೋತ್ಸವ

0

ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಿಂದ ದೈವದ ಭಂಡಾರ ಆಗಮನವಾಗಿ ದೈವಗಳ ನೇಮೋತ್ಸವ

ಚೆಂಬು ಗ್ರಾಮದ ಶ್ರೀ ಉಳ್ಳಾಕುಲು ದೈವಸ್ಥಾನದ ಚಾಂಬಾಡು ಕಿರು ಚಾವಡಿಯಲ್ಲಿ ಜಾಳ್ತೆ ನೇಮೋತ್ಸವವು ಡಿ.7ರಿಂದ ಡಿ.10ರವರೆಗೆ ಜರುಗಿತು.

ಡಿ.7ರಂದು ಬೆಳಿಗ್ಗೆ ಕೊಡಗಿನ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಕ್ಕೆ ಭಂಡಾರ ತರಲು ತೆರಳಿ, ಡಿ.8ರಂದು ಭಂಡಾರ ತಂದು ರಾತ್ರಿ ಹಿರಿಯರ ನೇಮೋತ್ಸವಕ್ಕೆ ಎಣ್ಣೆ ಕೊಡಲಾಯಿತು. ಪ್ರಾತಃಕಾಲ 4ರಿಂದ ನೇಮೋತ್ಸವ ಜರುಗಿತು.

ಡಿ.9ರಂದು ಎಡೆಕಡಪು,ಡಿ.10ರಂದು ಪ್ರಾತಃಕಾಲ ಕಿರಿಯರ ನೇಮೋತ್ಸವಕ್ಕೆ ಎಣ್ಣೆ ಕೊಡಲಾಯಿತು. ಬೆಳಿಗ್ಗೆ ಉಳ್ಳಾಕುಲು ಕುದುರೆ ಬಂಡಿ ಎಳೆಯುವುದು, ಪೂರ್ವಾಹ್ನ ಉಳ್ಳಾಕುಲು ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.

ಅಪರಾಹ್ನ ಪರಿವಾರ ದೈವಗಳಾದ ಪುರುಷ ದೈವ, ಅಡ್ಯಂತಾಯ, ಉದ್ರಾಂಡಿ, ಪೊಟ್ಟಭೂತ ಮತ್ತು ಪಂಜುರ್ಲಿ ದೈವದ ನಡಾವಳಿ ಜರುಗಿತು.

ಈ ಸಂದರ್ಭದಲ್ಲಿ ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು, ಮೊಕ್ತೇಸರರು ಮತ್ತು ಊರವರು, ಮಹಿಳಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರುಗಳು ಸೇರಿದಂತೆ ಪದಾಧಿಕಾರಿಗಳು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಡಿ.11ರಂದು ಬೆಳಿಗ್ಗೆ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಭಂಡಾರ ಕಳುಹಿಸಿಕೊಡಲಾಯಿತು. ಸಂಜೆ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ ಜರುಗಲಿದ್ದು, ರಾತ್ರಿ ಕಿನುಮಣಿ ಯಕ್ಷಕಲಾ ಸಂಘ ಮತ್ತು ನುರಿತ ಕಲಾವಿದರಿಂದ ಹಾಗೂ ಊರಿನ ಮಕ್ಕಳಿಂದ ಕಂಸವಧೆ – ರತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.