ಆಲೆಟ್ಟಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯ ಪೂರ್ವಭಾವಿ ಸಭೆ

0

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ 5 ನೇ ವಾರ್ಡಿನಲ್ಲಿರುವ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯ ಕುರಿತು ಪೂರ್ವ ಭಾವಿ ಸಭೆಯು ಪಂಚಾಯತ್ ಸಭಾಭವನದಲ್ಲಿ ಡಿ.12 ರಂದು ನಡೆಯಿತು.

ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾಕುಮಾರಿ ಆಲೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಆಲೆಟ್ಟಿ ಕಸ್ತೂರಿ ಮಹಿಳಾ ಮಂಡಲದ ಯಶೋಧ ಕುಡೆಕಲ್ಲು ಉಪಸ್ಥಿತರಿದ್ದರು.
ಸಿ.ಡಿ.ಪಿ.ಒ ಇಲಾಖೆಯ ಅರಂತೋಡು ವಲಯ ಮೇಲ್ವಿಚಾರಕಿ ಶ್ರೀಮತಿ ದೀಪಿಕಾ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಆಲೆಟ್ಟಿ ಸೊಸೈಟಿ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ರಾಮಚಂದ್ರ ಆಲೆಟ್ಟಿ, ಯೋಗೀಶ ಕಟ್ಟಕ್ಕಳ, ಸೀತಾರಾಮ ಮೊರಂಗಲ್ಲು, ಹರಿಪ್ರಸಾದ್ ಗುಂಡ್ಯ, ಶಿವಪ್ರಸಾದ್ ಆಲೆಟ್ಟಿ, ವ್ಯ.ಸ.ಸದಸ್ಯೆ ನಳಿನಿ ರೈ
ಆಲೆಟ್ಟಿ, ಗೌರಿ ಆಲೆಟ್ಟಿ, ಸುಮತಿ,ಪುಷ್ಪಾವತಿ,
ಭಾರತಿ ಕೆ.ಎಸ್
ಸ್ವಾಗತಿಸಿದರು.
ಅಂಗನವಾಡಿ ಕಾರ್ಯಕರ್ತೆ ಮಮತಾ ವಂದಿಸಿದರು.

ಡಿ. 28 ರಂದು ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸುವುದಾಗಿ ತೀರ್ಮಾನಿಸಲಾಯಿತು.