ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಅಂತರ್ ಶಾಲಾ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ

0

ಬ್ರಹ್ಮಗಿರಿ ಸಹೋದಯ ಕ್ಲಸ್ಟರ್ ಮಟ್ಟದ ಅಂತರ್ ಶಾಲಾ ಗಾಯನ ಸ್ಪರ್ಧೆಯು ಕೆ ವಿ ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಅಡಿಟೋರಿಯಂ ನಲ್ಲಿ ಡಿ.9ರಂದು ನಡೆಯಿತು.

ಹಿರಿಯ ಪ್ರಾಥಮಿಕ ವಿಭಾಗ ಮತ್ತು ಪ್ರೌಢಶಾಲಾ ವಿಭಾಗದ ಸ್ಪರ್ಧೆಯಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಹಿರಿಯ ಪ್ರಾಥಮಿಕ ವಿಭಾಗದ ಸ್ಪರ್ಧೆಯಲ್ಲಿ ಐದನೇ ತರಗತಿಯ ಖದೀಜಾ ಸಮೀಹ, ದಿಶಾ ಎಂ, ದ್ವಿತ ರಂಜನ್ ಆರನೇ ತರಗತಿಯ ಸಾನಿಧ್ಯ.ಕೆ, ಕೆ. ಎ ತನಿಷ್ಕ, ಈಶಾನ್ಯ ಎಮ್ ಬೆಳವಾಡಿ, ತನ್ವಿ ಪಿ.ಆರ್, ಅನುಜ್ಞ ಭಟ್ ಏಳನೇ ತರಗತಿಯ ಪ್ರತಿಕ್ಷ ಮತ್ತು ಫಾತಿಮಾ ಝುಲ್ಪ ಭಾಗವಹಿಸಿದ್ದರು.

ಅದೇ ರೀತಿ ಪ್ರೌಢಶಾಲಾ ವಿಭಾಗದ ಗಾಯನ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಮನ್ವಿತಾ ಸಿ ಎಚ್, ಅಲಿಶ್ಬ ಸಾರ, ಸೋನಾ ನಾರ್ಕೂಡು, ಸಾನ್ವಿ ಡಿ. ಡಿ 9ನೇ ತರಗತಿಯ ಸಾನ್ವಿ ಯಸ್, ಶಿಬಾನಿ ಎಂ ಜೆ, ಪುನರ್ವಿ ಕೆ. ಎ ಹತ್ತನೇ ತರಗತಿಯ ಶ್ರೇಯ ಯಸ್, ದೀಷ್ಮ ಮತ್ತು ಜನನಿ ಡಿ.ಕೆ ಭಾಗವಹಿಸಿದ್ದರು.

ಎಲ್ಲಾ ವಿಜೇತರನ್ನು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರವೃಂದದವರು ಅಭಿನಂದಿಸಿದರು.