ಗುಂಡ್ಯ ದಿ. ರುಕ್ಮಿಣಿ ಯವರ ಶ್ರದ್ಧಾಂಜಲಿ ಕಾರ್ಯಕ್ರಮ

0

ಆಲೆಟ್ಟಿ ಗ್ರಾಮದ ಗುಂಡ್ಯ ಮನೆತನದ ದಿ.ರಾಮಪ್ಪ ಗೌಡ ರವರ ಪತ್ನಿ ಶ್ರೀಮತಿ ರುಕ್ಮಿಣಿ ಗುಂಡ್ಯ ರವರು ಡಿ.2 ರಂದು ನಿಧನರಾಗಿದ್ದು ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಡಿ.12 ರಂದು ಗುಂಡ್ಯ ಮನೆಯಲ್ಲಿ ನಡೆಯಿತು.

ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಮೃತರಿಗೆ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ‌ಪುತ್ರರಾದ ಮಾಧವ ಗೌಡ ಗುಂಡ್ಯ, ನಿತ್ಯಾನಂದ ಗುಂಡ್ಯ, ಪುತ್ರಿಯರಾದ ಜಯಲಕ್ಷ್ಮಿ, ಜಲಜಾಕ್ಷಿ, ತೇಜಾವಾಣಿ, ಪದ್ಮಾವತಿ, ಅಳಿಯಂದಿರಾದ ಸೋಮನಾಥ, ಕುಮಾರ, ಸೊಸೆಯಂದಿರಾದ ಪುಷ್ಪಲತಾ, ಪವಿತ್ರ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ‌ ಸಲ್ಲಿಸಿದರು.