ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ: ಪಾರ್ಕಿಂಗ್ ಕುರಿತು ಸುಬ್ರಹ್ಮಣ್ಯ ಠಾಣಾ ಪ್ರಕಟಣೆ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ, ನಡೆಯುವ ವಾರ್ಷಿಕ ಚಂಪಾ ಷಷ್ಠಿ, ಜಾತ್ರೆ ಪುಯುಕ್ತ ಉತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಾಹನಗಳಿಗೆ ಪಾರ್ಕಿಂಗ್ ವಿಚಾರವಾಗಿ ಸೂಚನೆಗಳನ್ನು ನೀಡಲಾಗಿದೆ.

17-12-2023 ರ ಸಂಜೆ 04:00 ಗಂಟೆಯಿಂದ 18-12-2023 ರ ಸಂಜೆ 04-00 ಗಂಟೆಯವರೇಗೆ ಈ ಕೆಳಗಿನಂತೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಗುಂಡ್ಯ- ಉಪ್ಪಿನಂಗಡಿ-ಕಡಬ- ಪುತ್ತೂರು, ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ ಸುಬ್ರಹ್ಮಣ್ಯದ ವಲ್ಲೀಶ ಸಭಾ ಭವನದ ಬಳಿ ಪಾರ್ಕಿಂಗ್ ಸ್ಥಳ ಸೂಚಿಸಲಾಗಿದೆ.

ಗುಂಡ್ಯ-ಉಪ್ಪಿನಂಗಡಿ-ಕಡಬ-ಪುತ್ತೂರು ಕಡೆಯಿಂದ ಬರುವ ಲಘು ವಾಹನಗಳಿಗೆ, ಕುಮಾರಧಾರ ಹೆಲಿಪ್ಯಾಡ್, ಮತ್ತು ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವಾಹನಗಳನ್ನು ಪಾರ್ಕ್ ಮಾಡಲು ಸೂಚಿಸಲಾಗಿದೆ.

ಗುಂಡ್ಯ- ಉಪ್ಪಿನಂಗಡಿ-ಕಡಬ- ಪುತ್ತೂರು ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಸುಬ್ರಹ್ಮಣ್ಯ ಪದವಿ ಕಾಲೇಜು ಮೈದಾನ ಮತ್ತು ಬಿಲದ್ವಾರದ ಎದುರಿನ ಮೈದಾನ ಪಾರ್ಕ್ ಮಾಡಲು ಸೂಚಿಸಲಾಗಿದೆ.

ಸುಳ್ಯ ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ ಇಂಜಾಡಿ ಫಾರೆಸ್ಟ್ ವಸತಿ ಗೃಹದ ಬಳಿ ಮೈದಾನ.
ಹಾಗೂ ಸುಳ್ಯ ಕಡೆಯಿಂದ ಬರುವ ದ್ವಿಚಕ್ರವಾಹನಗಳಿಗೆ ಸುಬ್ರಹ್ಮಣ್ಯ ಸವಾರಿ ಮಂಟಪದ ಬಳಿ ಮೈದಾನ ಇರುವಂತೆ ಸೂಚನೆ.

ಸುಳ್ಯ ಕಡೆಯಿಂದ ಬರುವ ಲಘುವಾಹನಗಳಿಗೆ ಸವಾರಿ ಮಂಟಪದ ಬಳಿ ಪಾರ್ಕಿಂಗ್ ಸ್ಥಳ ಸೂಚಿಸಲಾಗಿದೆ.

ರಿಕ್ಷಾ ಚಾಲಕರು ಪ್ರಯಾಣಿಕರನ್ನು ಕುಮಾರಧಾರದಿಂದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಎದುರಿನ ತನಕ ಸಾಗಾಟ ಮಾಡಬಹುದಾಗಿದೆ.

ದಿನಾಂಕ 17-12-2023 ರಂದು ಸಂಜೆ 04-00 ಗಂಟೆಯಿಂದ ಎಲ್ಲಾ ವಾಹನಗಳು ಸಂಬಂದಿಸಿದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಬೇಕಾದುದುರಿಂದ ಲಾಡ್ಜ್ ಗಳಲ್ಲಿ ರೂಂ ಗಳನ್ನು ಕಾದಿರಿಸಿದವರು ಸಂಜೆ 04-00 ಗಂಟೆಯ ಒಳಗಡೆ ಸಂಬಂದಿಸಿದ ಲಾಡ್ಜ್ ಗಳಿಗೆ ಬರತಕ್ಕದ್ದು. ಮತ್ತು ಕುಮಾರಧಾರದಿಂದ ಸವಾರಿ ಮಂಟಪದ ತನಕ ರಸ್ತೆಯ ಎರಡು ಬದಿಗಳಲ್ಲಿ ವಾಹನ ಪಾರ್ಕಿಂಗ್ ಮಾಡುವುದನ್ನು ನಿಷೇದಿಸಲಾಗಿದೆ.

ಎಂದು ಸುಬ್ರಹ್ಮಣ್ಯ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.