ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ವಾರ್ಷಿಕ ಕ್ರೀಡಾಕೂಟ

0

ಪದವಿ ಪೂರ್ವ ಶಿಕ್ಷಣ ಇಲಾಖೆ ಸುಳ್ಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುಳ್ಯ ವತಿಯಿಂದ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಾರ್ಷಿಕ ಕ್ರೀಡಾಕೂಟ ಸಮಾರಂಭದ ಉದ್ಘಾಟನೆ ಇಂದು ನಡೆಯಿತು.

ಎಸ್.ಡಿ. ಎಂ.ಸಿ ಉಪಾಧ್ಯಕ್ಷ ಚಿದಾನಂದ ಕಾಯರ್ತೋಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಹಿರಿಯ ಶಿಕ್ಷಕಿ ಎ.ಜಿ. ಭವಾನಿ ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಎಸ್ ಡಿ ಎಂ ಸಿ ಸದಸ್ಯರುಗಳಾದ ಮುರಳಿ ಮೋಹನ್, ಜಗದೀಶ್, ವಿಜೇತ್,ಶಾಲಾ ಉಪಪ್ರಾಂಶುಪಾಲೆ ಜ್ಯೋತಿಲಕ್ಷ್ಮಿ ,ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಪದ್ಮನಾಭ, ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕಿ ಪದ್ಮಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆದು ಹಿರಿಯ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ಶಾಲಾ ಮೈದಾನಕ್ಕೆ ತಂದರು.

ಬಳಿಕ ವಿದ್ಯಾರ್ಥಿಗಳಿಂದ ಪ್ರಮಾಣವಚನ ನಡೆಯಿತು. ಶಾಲಾ ಎಸ್‌.ಡಿ.ಎಂ.ಸಿ ಉಪಾಧ್ಯಕ್ಷರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಾಂಶುಪಾಲರಾದ ಅಬ್ದುಲ್ ಸಮಾದ್ ಸ್ವಾಗತಿಸಿ ಉಪ ಪ್ರಾಂಶುಪಾಲರು ವಂದಿಸಿದರು.


ಶಿಕ್ಷಕ ಚಿನ್ನಪ್ಪ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕಾಲೇಜಿನ ಉಪನ್ಯಾಸಕರು, ಶಿಕ್ಷಕ ಶಿಕ್ಷಕಿಯರು, ಪೋಷಕವೃಂದದವರು, ಎಸ್ ಡಿ ಎಂ ಸಿ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಸಂಜೆಯ ವರೆಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದು ಸಂಜೆ ಸಮಾರೋಪ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.