ಸಾಹಿತಿ ಎಚ್. ಭೀಮರಾವ್ ವಾಷ್ಠರ್ ರಿಗೆ ಕನ್ನಡ ಕಣ್ಮಣಿ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ

0

ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಾಯಚೂರಿನಲ್ಲಿ ಡಿಸೆಂಬರ್ 24ರಂದು ಜರುಗಲಿರುವ ಬೆಳಕು ಸಂಭ್ರಮದ ರಾಷ್ಟ್ರೀಯ ಸಮಾರಂಭದಲ್ಲಿ ಸುಳ್ಯದ ಖ್ಯಾತ ಜ್ಯೋತಿಷಿ, ಸಾಹಿತಿ, ಸಂಘಟಕ, ಗಾಯಕ, ಚಿತ್ರ ನಿರ್ದೇಶಕರಾದ ಹೆಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರ ಜ್ಯೋತಿಷ್ಯ, ಸಾಹಿತ್ಯ, ಸಂಘಟನಾ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಗಾಗಿ ರಾಷ್ಟ್ರಮಟ್ಟದ ಕನ್ನಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಬೆಳಕು ಟ್ರಸ್ಟ್ ಅಧ್ಯಕ್ಷರಾದ ಅಣ್ಣಪ್ಪ ಮೇಟಿ ಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್. ಭೀಮರಾವ್ ವಾಷ್ಠರ್ ರವರು 2015 ರಲ್ಲಿ ಸುಳ್ಯದ ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಎರಡು ರಾಷ್ಟ್ರ ಪ್ರಶಸ್ತಿ ಪಡೆದುದಲ್ಲದೇ, 2011ರಲ್ಲಿ ವಿಜಯಪುರದಲ್ಲೂ ಕೂಡ ಸಾಹಿತ್ಯ ಸಾಧನೆಗಾಗಿ ರವೀಂದ್ರನಾಥ್ ಟ್ಯಾಗೋರ್ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದರು. ಇತ್ತೀಚಿಗೆ ಒಂದು ತಿಂಗಳಲ್ಲಿ ಎರಡು ರಾಜ್ಯಪ್ರಶಸ್ತಿ ಪಡೆದುದನ್ನು ಸ್ಮರಣಿಸಬಹುದು.