ಕುತ್ತಮೊಟ್ಟೆ ಶ್ರೀ ಶಾಸ್ತಾವು ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕೋತ್ಸವ, ಸಾರ್ವಜನಿಕ ಶ್ರೀ ದುರ್ಗಾಪೂಜೆ

0

ಉಬರಡ್ಕದ ಕುತ್ತಮೊಟ್ಟೆ ಶ್ರೀ ಶಾಸ್ತಾವು ಅಯ್ಯಪ್ಪ ಭಜನಾ ಮಂದಿರದ 32 ನೇ ವಾರ್ಷಿಕೋತ್ಸವ ಮತ್ತು 12 ನೇ ವರ್ಷದ ಸಾರ್ವಜನಿಕ ದುರ್ಗಾಪೂಜೆಯು ಪುರೋಹಿತ ನಟರಾಜ ಶರ್ಮ ಮತ್ತು ಬಳಗದ ನೇತೃತ್ವದಲ್ಲಿ ಡಿ.18 ರಂದು ನಡೆಯಿತು.


ಬೆಳಿಗ್ಗೆ ದೀಪಸ್ಥಾಪನೆ, ಗಣಪತಿಹವನ, ನಂತರ ಗೀತ ಜ್ಞಾನ ಯಜ್ಞ ತಂಡ ಬಾಳಿಲ ಇವರಿಂದ ಭಗವದ್ಗೀತೆ ಪಾರಾಯಣ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಶ್ರೀ ಶಾಸ್ತಾವು ಅಯ್ಯಪ್ಪ ಸ್ವಾಮಿಗೆ ವಿಶೇಷ ಮಹಾಪೂಜೆಯಾಗಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಸಂಜೆ ಶ್ರೀ ಉಳ್ಳಾಕುಲು ಭಜನಾ ತಂಡದಿಂದ ಕುಣಿತ ಭಜನೆ ಹಾಗೂ ರಾತ್ರಿ ಸಾರ್ವಜನಿಕ ಶ್ರೀ ದುರ್ಗಾಪೂಜೆ, ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಂದಿರದ ಎಲ್ಲಾ ಪದಾಧಿಕಾರಿಗಳು, ಊರವರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.