ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಪೋಷಕರಿಗೆ ಕ್ರೀಡಾಕೂಟ

0

ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಪೋಷಕರಿಗೆ ಕ್ರೀಡಾಕೂಟವು ಡಿ. 19 ರಂದು ನಡೆಯಿತು. ಕಾರ್ಯಕ್ರಮವನ್ನು ಸುಳ್ಯ ಪೊಲೀಸ್ ಠಾಣೆಯ ಕ್ರೈಮ್ ಎಸ್ ಐ ಸರಸ್ವತಿಯವರು ಉದ್ಘಾಟಿಸಿದರು.
ಬಳಿಕ ಮಹಿಳಾ ದೌರ್ಜನ್ಯ, ಪೋಕ್ಸೋ , ಮಾದಕ ವಸ್ತುಗಳ ಬಳಕೆ ಹಾಗೂ ಮಕ್ಕಳು ಮೊಬೈಲ್ ಬಳಕೆಯಿಂದ ತೊಂದರೆಯ ಬಗ್ಗೆ ಮಾಹಿತಿ ನೀಡಿದರು.

ಶಾಲಾ ಸಂಚಾಲಕರಾದ ಫಾ.ರೆ.ವಿಕ್ಟರ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಹಾರೈಸಿ ಮಾತನಾಡಿದರು. ಶಾಲಾ ಪ್ರಾಥಮಿಕ ಶಾಲಾ ಪೋಷಕ ಸಮಿತಿ ಅಧ್ಯಕ್ಷ ಜೆ.ಕೆ ರೈ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮ, ಶಾಲಾ ಫೌಢಶಾಲಾ ಸಮಿತಿ ಅಧ್ಯಕ್ಷರಾದ ಗುರುಸ್ವಾಮಿ ಉಪಸ್ಥಿತರಿದ್ದರು. ಶಿಕ್ಷಕ ಕೊರಗಪ್ಪರವರು ಕಾರ್ಯಕ್ರಮ ನಿರೂಪಿಸಿ, ಹರಿಣಾಕ್ಷಿ ಸುಳ್ಯ ವಂದಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು,ಶಿಕ್ಷಕರು,ಪೋಷಕರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಪೋಷಕರಿಗೆ ಲಕ್ಕಿ ಗೇಮ್, ವಾಲಿಬಾಲ್,ತ್ರೋಬಾಲ್,ಹಗ್ಗಜಗ್ಗಾಟ ನಡೆಯಿತು.