ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹರಿದು ಬಂದ ಭಕ್ತ ಸಾಗರ

0

ಜಾತ್ರಾಂತ್ಯಕ್ಕೆ ಮತ್ತೆ ಜಾತ್ರೆಯಂತಾದ ಸುಬ್ರಹ್ಮಣ್ಯ

ತುಂಬಿದ ವಸತಿ ಗೃಹಗಳು : ರಥಬೀದಿಯಲ್ಲೇ ಮಲಗಿದ ಭಕ್ತಾದಿಗಳು

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಕ್ತ ಸಾಗರವೇ ಹರಿದು ಬಂದ ಡಿ.24 ರಂದು ವರದಿಯಾಗಿದೆ. ವಾರ್ಷಿಕ ಜಾತ್ರಾಂತ್ಯದ ದಿನ ಮತ್ತೆ ಜನ ಜಾತ್ರೆ ಆರಂಭವಾದಂತಾಗಿದೆ.

ವಾರಾಂತ್ಯ ರಜೆ, ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ತುಸು ಹೆಚ್ಚೇ ಭಕ್ತರು ಆಗಮಿಸಿದ್ದಾರೆ. ಸುಬ್ರಹ್ಮಣ್ಯದಲ್ಲಿ ಮತ್ತೆ ಜಾತ್ರೆ ಇದ್ದದ್ದೆ ಕಂಡು ಬಂದಿದೆ. ಆ ಪರಿಯಾಗಿ ಜನರು ತುಂಬಿ ತುಳುಕಿದರು. ಎಲ್ಲೆಂದರಲ್ಲಿ ಜನರೇ ಕಂಡು ಬಂದರು. ವಸತಿ ಗೃಹಗಳು ತುಂಬಿ ಮಲಗಲು ಸ್ಥಳವಿಲ್ಲದೆ ರಥಬೀದಿಯಲ್ಲೇ ಜನರು ಮಲಗಿ ನಿದ್ರಿಸಿದ್ದಾರೆ. ದೇವಾಲಯ ಧರ್ಮಚತ್ರ, ಆಡಳಿತ ಕಛೇರಿ ಬಳಿ ಭಕ್ತರೇ ಮಲಗಿರುವುದು ಕಂಡು ಬಂತು. ಇದಲ್ಲದೆ ನೀರು ಬಂಡಿ ಉತ್ಸವ ಇದ್ದ ಕಾರಣ ಅದಕ್ಕಾಗಿಯೂ ಭಕ್ತರು ಆಗಮಿಸಿದ್ದರು. ಇಂದು ಬೆಳಗ್ಗೆ ಯೂ ಸುಬ್ರಹ್ಮಣ್ಯ ತುಂಬಿ ತುಳುಕುತಿದ್ದು ಕುಮಾರಧಾರ, ಸುಬ್ರಹ್ಮಣ್ಯ ಪೇಟೆ, ದೇವಾಲಯ ಆಸುಪಾಸು ಎಲ್ಲೆಂದರಲ್ಲಿ ಜನವೇ ತುಂಬಿ ಹೋಗಿದ್ದಾರೆ.