ಎಣ್ಮೂರು : ಅಸೌಖ್ಯದಿಂದ ಬಾಲಕ ಮೃತ್ಯು

0

ಎಣ್ಮೂರು ಕಟ್ಟ ಕಾಲಾನಿ ನಿವಾಸಿಗಳಾದ ಯಮುನ ಶಿವಪ್ಪ ದಂಪತಿಗಳ ಪುತ್ರ ಕಿಶನ್ ಡಿ. ೨೪ರಂದು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ಮೃತಪಟ್ಟ ಘಟನೆ ವರದಿಯಾಗಿದೆ.


ಡಿ.೧೭ರಂದು ಸಂಜೆ ಮನೆಯಂಗಳದಲ್ಲಿ ಆಟ ಆಡುವಾಗ ಕಿಶನ್ ಬಿದ್ದಿದ್ದು, ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟನೆಂದು ತಿಳಿದುಬಂದಿದೆ. ಆತನಿಗೆ 10 ವರ್ಷ ವಯಸ್ಸಾಗಿತ್ತು.
ಮೃತರು ತಂದೆ ಶಿವಪ್ಪ ತಾಯಿ ಯಮುನ ಸಹೋದರಾದ ತುಷಾರ್, ಕಿಶೋರ್, ಕೀರ್ತನ್, ಕುಟುಂಬಸ್ಥರನ್ನು ಅಗಲಿದ್ದಾರೆ . ಕಿಶನ್ ಎಣ್ಮೂರು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದು, ಶಾಲಾ ಮುಖ್ಯೋಪಾಧ್ಯಾಯಿನಿ ಭುವನೇಶ್ವರಿ, ಎಸ್ .ಡಿ.ಎಂ.ಸಿ. ಅಧ್ಯಕ್ಷ ಅಬ್ದುಲ್ ಶರೀಫ್, ಸಿ.ಆರ್.ಪಿ. ಜಯಂತ್. ಕೆ., ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು, ಸದಸ್ಯರಾದ ಮಾಯಿಲಪ್ಪ ಗೌಡ, ರೇವತಿ ಎಣ್ಮೂರು ಆಗಮಿಸಿ ಅಂತಿಮ ದರ್ಶನ ಪಡೆದರು.