ಕೊಯನಾಡು: ನೇಣುಬಿಗಿದು ಆತ್ಮಹತ್ಯೆ

0

ತನ್ನ ಮನೆಯ ಸಮೀಪದಲ್ಲಿ ರಬ್ಬರ್ ಮರಕ್ಕೆ ನೇಣುಬಿಗಿದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಸಂಪಾಜೆ ಗ್ರಾಮದ ಕೊಯನಾಡಿನಲ್ಲಿ ಡಿ.26ರಂದು ಬೆಳಿಗ್ಗೆ ಸಂಭವಿಸಿದೆ.

ಕೊಯನಾಡಿನ ಬಂಡಡ್ಕ ಗಣಪಯ್ಯ ಎಂಬವರ ಪುತ್ರ ಮಹೇಶ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಗೆ 36 ವರ್ಷ ವಯಸ್ಸಾಗಿತ್ತು.
ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ ವಿನುತ, ಇಬ್ಬರು ಪುತ್ರಿಯರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.