ಐವರ್ನಾಡು ಮುಚ್ಚಿನಡ್ಕ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠಾ ನೇಮೋತ್ಸವ ಮತ್ತು ಕಲ್ಲುರ್ಟಿ ದೈವದ ನೇಮೋತ್ಸವ

0

ಐವರ್ನಾಡು ಗ್ರಾಮದ ಮುಚ್ಚಿನಡ್ಕ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠಾ ನೇಮೋತ್ಸವ ಮತ್ತು ಕಲ್ಲುರ್ಟಿ ದೈವದ ನೇಮೋತ್ಸವವು ಡಿ.28 ರಂದು ರಾತ್ರಿ ನಡೆಯಿತು.


ಬೆಳಿಗ್ಗೆ ಗಣಹೋಮ, ಕೊರಗಜ್ಜ ಕಟ್ಟೆಯ ಪ್ರತಿಷ್ಠೆ ನಡೆಯಿತು.
ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಕಲ್ಲುರ್ಟಿ ದೈವದ ಭಂಡಾರ ತೆಗೆಯಲಸಯಿತು.ಬಳಿಕ ಕಲ್ಲುರ್ಟಿ ದೈವದ ನೇಮೋತ್ಸವ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.


ರಾತ್ರಿ ಶ್ರೀ ಕೊರಗಜ್ಜ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಮಣಿ ಎಂ.ಮುಚ್ಚಿನಡ್ಕ, ಮತ್ತು ಮನೆಯವರು,ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಸರ್ವಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.