ಪುತ್ತೂರು : ನಗರ ಸಭಾ ಉಪ ಚುನಾವಣೆ : ಸುಳ್ಯದ ಡ್ರೈವಿಂಗ್ ಸ್ಕೂಲ್ ಮಾಲಕ ರಮೇಶ್ ರೈ ವಿಜಯ

0

ಪುತ್ತೂರಿನ ನಗರ ಸಭೆಯ ತೆರವಾದ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ವಾರ್ಡ್ 1ರಲ್ಲಿ ಕಾಂಗ್ರೆಸ್ ನ ದಿನೇಶ್ ಶೇವಿರೆ ಹಾಗೂ ವಾರ್ಡ್ 11 ರಲ್ಲಿ ಬಿ.ಜೆ.ಪಿ.ಯ ರಮೇಶ್ ರಯು ಜಯಭೇರಿ ಬಾರಿಸಿದ್ದಾರೆ.

ರಮೇಶ್ ರೈಯವರು ಸುಳ್ಯದ ಮಂಗಳಾ ಡ್ರೈವಿಂಗ್ ಸ್ಕೂಲ್‌ನ ಮಾಲಕರಾಗಿದ್ದು ಈ ಹಿಂದೆಯೂ ಎರಡು ಬಾರಿ ಪುತ್ತೂರು ಪುರಸಭೆಯ ಸದಸ್ಯರಾಗಿದ್ದರು.
ವಾರ್ಡ್ 11 ರಲ್ಲಿ ಚಲಾವಣೆಯಾದ ಒಟ್ಟು 1053 ಮತಗಳಲ್ಲಿ ಬಿಜೆಪಿಯ ರಮೇಶ್ ರೈ 431, ಕಾಂಗ್ರೆಸ್ ನ ದಾಮೋದರ ಭಂಡಾರ್‌ಕರ್ 400, ಪುತ್ತಿಲ ಪರಿವಾರದ ಚಿಂತನ್ 216 ಮತಗಳನ್ನು ಪಡೆದು ಕೊಂಡಿದ್ದಾರೆ. 6 ಮತ ನೋಟಕ್ಕೆ ಚಲಾವಣೆಯಾಗಿದೆ. ರಮೇಶ್ ರೈ 31 ಮತಗಳ ಅಂತದಲ್ಲಿ ಜಯಗಳಿಸಿದ್ದಾರೆ.

ವಾರ್ಡ್ 1ರಲ್ಲಿ ಚಲಾವಣೆಯಾದ ಒಟ್ಟು 958 ಮತಗಳಲ್ಲಿ ಕಾಂಗ್ರೆಸ್ ನ ದಿನೇಶ್ ಶೇವಿರೆ 427, ಬಿಜೆಪಿಯ ಸುನೀತಾ 219 ಹಾಗೂ ಪುತ್ತಿಲ ಪರಿವಾರದ ಅನ್ನಪೂರ್ಣ 308 ಮತಗಳನ್ನು ಪಡೆದುಕೊಂಡಿದ್ದಾರೆ. 4 ಮತ ನೋಟಕ್ಕೆ ಚಲಾವಣೆಯಾಗಿದೆ. ಕಾಂಗ್ರೆಸ್ ನ ದಿನೇಶ್ ಶೇವಿರೆ 119 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.