ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಕ್ಕೆ ಪ್ರಾಂತ್ಯಾಧ್ಯಕ್ಷೆ ರೇಣುಕಾ ಸದಾನಂದ ಜಾಕೆ ಭೇಟಿ

0

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಕ್ಕೆ ಪ್ರಾಂತ್ಯಾಧ್ಯಕ್ಷೆ ರೇಣುಕಾ ಸದಾನಂದ ಜಾಕೆ ಭೇಟಿ ಕಾರ್ಯಕ್ರಮ ಡಿ. 31ರಂದು ಕ್ಲಬ್‌ನ ಸದಸ್ಯ ಯತೀಶ್ ಭಂಡಾರಿಯವರ ಮನೆಯಲ್ಲಿ ನಡೆಯಿತು. ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗದ ಅಧ್ಯಕ್ಷ ವಿಠಲ್ ಶೆಟ್ಟಿ ಪೆರುವಾಜೆ, ಕಾರ್ಯದರ್ಶಿ ದಯಾನಂದ ನಾಯ್ಕ, ಎಕ್ಸ್ಟೆನ್ ಶನ್ ಚಯರ್ ಪರ್ಸನ್ ಆನಂದ ರೈ ಪ್ರಾಂತ್ಯಾಧ್ಯಕ್ಷೆ ರೇಣುಕಾ ಸದಾನಂದ ಜಾಕೆಯವರನ್ನು ಮತ್ತು ಅತಿಥಿಗಳನ್ನು ವೇದಿಕೆಯಲ್ಲಿ ಆಹ್ವಾನಿಸಿ ಶುಭ ಹಾರೈಸಿದರು.

ಅಧ್ಯಕ್ಷ ವಿಠಲ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ದಯಾನಂದ ನಾಯ್ಕ ವರದಿ ವಾಚಿಸಿ ವಂದಿಸಿದರು. ಸದಾನಂದ ಜಾಕೆ ಸೇರಿದಂತೆ ಕ್ಲಬ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಾಂತ್ಯಾಧ್ಯಕ್ಷೆ ಶ್ರೀಮತಿ ರೇಣುಕಾ ಸದಾನಂದ ಜಾಕೆ ದಂಪತಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.