ಜ.22ರಂದು ಶ್ರೀ ಆತ್ಮಾರಾಮನ ಸನ್ನಿಧಿಯಲ್ಲಿ ರಾಮರಕ್ಷಾ ಸ್ತೋತ್ರ ಪಠಣ, ಭಜನೆ , ದೀಪ ಪ್ರಜ್ವಲನೆ ಮಹಾಪೂಜೆ
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಬಂದಿರುವ ಮಂತ್ರಾಕ್ಷತೆ ಮನೆ ಮನೆಗೆ ವಿತರಿಸುವ ಕಾರ್ಯಕ್ಕೆ ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ಜ.1ರಂದು ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.










ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯು ಜ.22ರಂದು ನಡೆಯಲಿದ್ದು, ಈ ಪ್ರಯುಕ್ತ ಕಳೆದ ತಿಂಗಳು ಭಜನಾ ಮಂದಿರಕ್ಕೆ ಬಂದಿದ್ದ ಮಂತ್ರಾಕ್ಷತೆಗೆ ನಿರಂತರ ಪೂಜೆ, ರಾಮ ನಾಮ ಮಂತ್ರ ಪಠಣ ಸಲ್ಲಿಸಲಾಗಿದ್ದು, ಜ.1ರಿಂದ ಗ್ರಾಮದ ಪ್ರತೀ ಹಿಂದೂ ಬಾಂಧವರ ಮನೆಗೆ ವಿತರಿಸುವ ಕಾರ್ಯ ನಡೆಯಲಿದೆ.
ಈ ಸಂದರ್ಭದಲ್ಲಿ ಭಜನಾ ಮಂದಿರದ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಜ.22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಪ್ರಯುಯ ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ಬೆಳಿಗ್ಗೆ ರಾಮ ನಾಮ ತಾರಕ ಜಪ , ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಪ್ರತೀ ಹಿಂದೂ ಬಾಂಧವರ ಮನೆಯಲ್ಲಿ ಐದು ದೀಪ ಹಚ್ಚಿ ಉತ್ತರ ದಿಕ್ಕಿಗೆ ಆರತಿ ಬೆಳಗುವಿಕೆ, ಬಳಿಕ ಪ್ರತೀ ಮನೆಯಿಂದ ಒಂದು ಹಣತೆಯನ್ನು ಶ್ರೀ ಆತ್ಮಾರಾಮ ಭಜನಾ ಮಂದಿರಕ್ಕೆ ತಂದು ಸಾಮೂಹಿಕ ಶ್ರೀ ರಾಮ ರಕ್ಷಾ ಸ್ತೋತ್ರ ಪಠಣ, ಭಜನೆ , ಸಾಮೂಹಿಕ ಮಹಾಮಂಗಳಾರತಿ ಪ್ರಸಾದ ವಿತರಣೆ ಜರುಗಲಿದೆ.









