ದೇವಚಳ್ಳ ಶಾಲೆಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ – ಮುಖ್ಯೋಪಾಧ್ಯಾಯರ ಸ್ಪಷ್ಟನೆ

0

ನಾನು ಕಂಡ ಭ್ರಷ್ಟಾಚಾರ ಎಂಬ ಶೀರ್ಷಿಕೆಯಡಿಯಲ್ಲಿ ಆಶಿಷ್ ಎಂಬ ವಿದ್ಯಾರ್ಥಿ ಸುದ್ದಿಗೆ ಬರೆದ ಪತ್ರದಲ್ಲಿ ದೇವಚಳ್ಳ ಶಾಲೆಯಲ್ಲಿ ಭ್ರಷ್ಟಾಚಾರ ಆಗಿ ದೂರು ಕೊಟ್ಟಾಗ ಯಾರು ಬರಲಿಲ್ಲ ಎಂದು ಅಪ್ಪ ಹೇಳಿದ್ದಾರೆ ಎನ್ನುವ ಉಲ್ಲೇಖಕ್ಕೆ ದೇವಚಳ್ಳ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಧರ ಗೌಡರು ಸ್ಪಷ್ಟನೆ ನೀಡಿದ್ದು, ನಮ್ಮ ಶಾಲೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಆಗಿಲ್ಲ ಎಂದು ತಿಳಿಸಿದ್ದಾರೆ.

” ಈ ವಿಚಾರದ ಬಗ್ಗೆ ಚರ್ಚಿಸಲು ಇಂದು ಎಸ್.ಡಿ.ಎಂ.ಸಿ.ಯ ಸಭೆ ನಡೆಯಲಿಕ್ಕಿದೆ. ಸಭೆಯ ಬಳಿಕ ನಾವು ವಿವರವಾದ ಸ್ಪಷ್ಟನೆಯನ್ನು ನೀಡುತ್ತೇವೆ. ಹಲವು ವರ್ಷಗಳ ಹಿಂದಿನ ಘಟನೆಯೊಂದನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ಶಾಲೆಯ ಬಗ್ಗೆ ಈ ರೀತಿ ಅಪಪ್ರಚಾರ ಮಾಡಿರುವುದು ಸರಿಯಲ್ಲ” ಎಂದು ಅವರು ಹೇಳಿದರು.