ರಾಷ್ಟ್ರಮಟ್ಟದ ಕಬಡ್ಡಿ ಸ್ಪರ್ಧೆ ಕ್ರೀಡಾಧಿಕಾರಿಯಾಗಿ ಬೆಳ್ಳಾರೆ ಕೆಪಿಎಸ್ ನ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಪಿ. ನೇಮಕ

0

67ನೇ ರಾಷ್ಟ್ರಮಟ್ಟದ 17ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾವಳಿ ತೆಲಂಗಾಣ ರಾಜ್ಯದ ಕಾಮರೆಡ್ಡಿ ನಗರದಲ್ಲಿ ಜ.6 ರಿಂದ 11ರವರೆಗೆ ಆಯೋಜಿಸಿದ್ದು ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ರಾಜ್ಯದ ತಂಡದ ಕ್ರೀಡಾಪಟುಗಳ ಸುರಕ್ಷತೆ ಹಾಗೂ ಮೇಲ್ವಿಚಾರಕರಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಇವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರು ನೇಮಕ ಮಾಡಿದ್ದಾರೆ.
ಕ್ರೀಡಾಪಟುಗಳು ಮತ್ತು ಕ್ರೀಡಾಧಿಕಾರಿಗಳು ಜ. 14ರಂದು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಕಾಚಿಗುಡ ಎಕ್ಸ್ಪ್ರೆಸ್ ರೈಲಿನಲ್ಲಿ ಹೊರಟು ಜನವರಿ 6ರಂದು ವರದಿ ಮಾಡಿಕೊಳ್ಳಬೇಕು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುಷ್ಪಾವತಿ ಇವರು ಐವತ್ತೊಕ್ಲು ಗ್ರಾಮದ ದಿ. ಬಾಳಪ್ಪ ಗೌಡ ಪುರಿಯ ಮನೆ ಹಾಗೂ ಶ್ರೀಮತಿ ಮೀನಾಕ್ಷಿ ದಂಪತಿಗಳ ಪುತ್ರಿ. ಜಗದೀಶ್ ಪುರಿಯರವರ ಸಹೋದರಿ. ನಿಸರ್ಗ ಎಂಟರ್ಪ್ರೈಸಸ್ ಮಾಲಕ ಮನೋಜ್ ಕುಮಾರ್ ಬಿ.ಆರ್. ರವರ ಪತ್ನಿ.