ಹರಿಹರ ಪಲ್ಲತಡ್ಕ: ಮಲ್ಲಾರ ಬಳಿ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರು – ಸವಾರರಿಗೆ ಗಾಯ

0

ಹರಿಹರ ಪಲ್ಲತಡ್ಕದ ಮಲ್ಲಾರ ಎಂಬಲ್ಲಿ ಸ್ಕೂಟಿಗೆ ವಿರುದ್ದ ದಿಕ್ಕಿನಿಂದ ಬಂದ ಕಾರು ಡಿಕ್ಕಿ ಹೊಡೆದು ಸ್ಕೂಟಿಯಲ್ಲಿದ್ದ ದಂಪತಿಗಳು ಗಾಯಗೊಂಡ ಘಟನೆ ಜ.10 ರಂದು ವರದಿಯಾಗಿದೆ.

ಹರಿಹರ ಪಲ್ಲತಡ್ಕದ ಕರೆಕ್ಕೂಡಿ ನಿವಾಸಿ ಕುಂಞಿ ಮೋನು ಮತ್ತವರ ಪತ್ನಿ ಶಾಲಿನಿ ಹರಿಹರದಿಂದ ನಡುಗಲ್ಲು ಕಡೆ ತೆರಳುತಿದ್ದು ಮಲ್ಲಾರ ಬಳಿ ತಲುಪಿದಾಗ ಎದುರುಗಡೆಯಿಂದ ಬಂದ ಕೊಲ್ಲಮೊಗ್ರು ನಿವಾಸಿ ಟಿ.ಎಂ ಮೊಹಮ್ಮದ್ ಅವರು ಚಲಾಯಿಸಿಕೊಂಡು ಬಂದ ಕಾರು ರಾಂಗ್ ಸೈಡಿಗೆ ಬಂದು ಸ್ಕೂಟಿಯಲ್ಲಿದ್ದವರಿಗೆ ಡಿಕ್ಕಿ ಹೊಡೆದಿದೆ. ಸ್ಕೂಟಿಯಲ್ಲಿದ್ದವರು ಎಸೆಯಲ್ಪಟ್ಟು ರಸ್ತೆಯಿಂದ ಹೊರಗಡೆ ಬಿದ್ದಿದ್ದಾರೆ.

ಕುಂಞಿಮೋನು ಅವರಿಗೆ ಕಾಲುಗಳಿಗೆ, ಕೈಗೆ ಹಾಗೂ ಅವರ ಪತ್ನಿಯ ಕಾಲಿನ ಹಿಮ್ಮಡಿ, ಬಲ ಕೈಯ ಗಂಟಿಗೆ ಬಲವಾದ ಗಾಯಗಳಾಗಿವೆ. ಸ್ಕೂಟಿ ಸಂಪೂರ್ಣ ನಜ್ಜುಗುಜ್ಜಾಗಿ ರಸ್ತೆಯಿಂದ ದೂರ ಹೋಗಿ ಬಿದ್ದಿತ್ತು. ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಗಿದೆ. ಗೋಪಾಲಕೃಷ್ಣ ಉಂಬ್ರಾಳ ಮತ್ತು ಕುಶಾಲಪ್ಪ ಕಾಂತುಕುಮೇರಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.