ಬೆಳ್ಳಾರೆ ಮಖಾಂ ಉರೂಸ್ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಕಛೇರಿ ಉದ್ಘಾಟನೆ

0

ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿಯಲ್ಲಿ ಹಝ್ರತ್ ವಲಿಯುಲ್ಲಾಹಿ ಮಖಾಂ ಉರೂಸ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಜಮಾಯತ್ ಕಮಿಟಿ ಕಛೇರಿ ಮತ್ತು ಉರೂಸ್ ಕಮಿಟಿ ಕಛೇರಿ ಉದ್ಘಾಟನೆ ಸಮಾರಂಭ ಜ.12 ರಂದು ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಿತು.

ಆಮಂತ್ರಣ ಪತ್ರಿಕೆಯ ಬಿಡುಗಡೆ ಮತ್ತು ಕಛೇರಿ ಉದ್ಘಾಟನೆಯನ್ನು ಮಹಮ್ಮದ್ ನವವಿ ಮುಂಡೋಳೆ ನೇರವೆರಿಸಿದರು.

ಜಮಾಯತ್ ಕಮಿಟಿ ಅಧ್ಯಕ್ಷ ಯು ಹೆಚ್ ಅಬೂಭಕ್ಕರ್ ಹಾಜಿ ಮಂಗಳ,ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್‌ ಖಾದರ್ ಹಾಜಿ ಬಾಯಂಬಾಡಿ ಮತ್ತು ಜಮಾಯತ್ ಕಮಿಟಿ ಮತ್ತು ಉರೂಸ್ ಕಮಿಟಿ ಪದಾಧಿಕಾರಿಗಳು ಹಾಗೂ ಜಮಾಯತರು ಉಪಸ್ಥಿತರಿದ್ದರು.