ಯುವಕ ಮಂಡಲ ಕಳಂಜ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

0

ಯುವಕ ಮಂಡಲ ಕಳಂಜ ವತಿಯಿಂದ ಜ.13 ರಂದು ಕೋಟೆಮುಂಡುಗಾರಿನಲ್ಲಿ ಪುರುಷರ ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆದಿದ್ದು ಆಶಿಕ್ – ಯಜ್ಞೇಶ್ ಪುತ್ತೂರು ತಂಡ ಪ್ರಥಮ ಹಾಗೂ ಶ್ರೇಯಸ್ – ಪವನ್ ಸುಳ್ಯ ತಂಡ ದ್ವಿತೀಯ ಸ್ಥಾನ ಪಡೆಯಿತು.

ಶಾಕೀರ್ – ದರ್ಶನ್ ಉಡುಪಿ ತಂಡ ತೃತೀಯ ಹಾಗೂ ಅನುಷ್ – ಭರತ್ ಉಡುಪಿ ತಂಡ ಚತುರ್ಥ ಸ್ಥಾನ ಪಡೆದು ನಗದು ಹಾಗೂ ಫಲಕ ಬಹುಮಾನ ಪಡೆದವು . ಒಟ್ಟು 34 ತಂಡಗಳು ಪಂದ್ಯಾಕೂಟಗಳು ಭಾಗವಹಿಸಿದ್ದವು. ಸಾಂಕೇತಿಕ ಸಭಾ ಕಾರ್ಯಕ್ರಮ ಮಾಡಲಾಗಿದ್ದು ಸಭಾ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಶಿವರಾಮ ಗೌಡ ಕಜೆಮೂಲೆ ವಹಿಸಿದ್ದರು.

ವೇದಿಕೆಯಲ್ಲಿ ಅತಿಥಿಗಳಾಗಿ ಕಳಂಜ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ವೈದ್ಯ ಡಾ.ಕಿಶನ್ ರಾವ್ ಬಾಳಿಲ, ಕು.l ಮಮತಾ ಪಾಂಡಿಪಾಲು ಉಪಸ್ಥಿತರಿದ್ದರು. ಯುವಕ ಮಂಡಲದ ಗೌರವಾಧ್ಯಕ್ಷ ರಾಮಯ್ಯ ರೈ ಕಜೆಮೂಲೆ, ಕಾರ್ಯದರ್ಶಿ ರಮೇಶ್ ಕೋಡಿಯಡ್ಕ ವೇದಿಕೆಯಲ್ಲಿದ್ದರು.

ನಾರಾಯಣ ಕೋಡಿಯಡ್ಕ ಪ್ರಾರ್ಥಿಸಿ ಮೋನಪ್ಪ ಕೋಡಿಯಡ್ಕ ಸ್ವಾಗತಿಸಿದರು. ಲಕ್ಷ್ಮೀಶ ಕಜೆಮೂಲೆ ವಂದಿಸಿದರು. ಜಗದೀಶ್ ಮುಂಡುಗಾರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಸದಸ್ಯರಾಗಿದ್ದು ಇತ್ತೀಚೆಗೆ ದಿವಗಂತರಾದ ವೆಂಕಟ್ರಮಣ ಭಟ್ ಪವನ ಹಾಗೂ ರವಿ ನಾರಾಯಣ ಶೇಡಿಕಜೆ ಅವರಿಗೆ ಮೌನ ಪ್ರಾರ್ಥನೆ ಶ್ರದ್ಧಾಂಜಲಿ ಕೋರಲಾಯಿತು. ಪಂದ್ಯಾ ಕೂಟ ಮುಗಿದ ಬಳಿಕ ಬಹುಮಾನ ವಿತರಿಸಲಾಯಿತು.