ಕಳಂಜ: ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ವತಿಯಿಂದ ಶ್ರದ್ಧಾಂಜಲಿ ಸಭೆ

0

ಡಿ. 31ರಂದು ನಿಧನರಾದ ಕಳಂಜ‌ ಬಾಳಿಲ ಪ್ರಾ.ಕೃ.ಪ.ಸ.ಸಂಘದ ರೈತ ಸ್ನೇಹಿತರ ಕೂಟದ ಪ್ರಧಾನ ಸೇವಕ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿಯ ಕಾರ್ಯದರ್ಶಿ ಕೆ. ವೆಂಕಟ್ರಮಣ ಭಟ್ ಪವನ ಮತ್ತು ಜ. 11ರಂದು ನಿಧನರಾದ ರವಿನಾರಾಯಣ ಶೇಡಿಕಜೆಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಜ. 13ರಂದು ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಂಡಳಿಯ ಅಧ್ಯಕ್ಷ ಮುಂಡುಗಾರು ಸುಬ್ರಹ್ಮಣ್ಯರ ಅಧ್ಯಕ್ಷತೆಯಲ್ಲಿ ನಡೆಯಿತು. ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆದ್ಲ ನರಸಿಂಹ ಭಟ್, ಧರ್ಮದರ್ಶಿ ಸೀತಾರಾಮ ಕೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಬಳಿಕ ತಿಂಗಳ ಭಜನಾ ಕಾರ್ಯಕ್ರಮ ನಡೆಯಿತು.