ಅರಂತೋಡು ಮಸೀದಿಗೆ ಡಿಜಿಟಲ್ ಗಡಿಯಾರ ಕೊಡುಗೆ

0

ದಿವಂಗತ ಕೆ.ಆರ್ ಅಬೂಬಕ್ಕರ್ ಹಾಜಿ ಕೊಡಂಕೇರಿರವರ ಸ್ಮರಣಾರ್ಥ ಮಕ್ಕಳಾದ ರಾಫಿ ಆರಿಕ್ಕಾಡಿ ಹಾಗೂ ಸಹೋದರರು ಅರಂತೋಡು ಬದ್ರಿಯಾ ಜುಮಾ ಮಸೀದಿಗೆ ಸುಮಾರು 16 ಸಾವಿರ ರೂ ಮೌಲ್ಯದ ನಮಾಝ್ ಸಮಯ ತಿಳಿಸುವ ಡಿಜಿಟಲ್ ಗಡಿಯಾರವನ್ನು ಕುಟುಂಬಸ್ಥರ ಪರವಾಗಿ ಅನ್ಸಾಫ್ ಕೊಡಂಕೇರಿಯವರು ಜ.14 ರಂದು ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿಯವರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಕಾರ್ಯದರ್ಶಿ ಕೆ.ಎಂ ಮೂಸಾನ್, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಅಧ್ಯಾಪಕ ಶಾಫಿ ಮುಸ್ಲಿಯಾರ್, ಸಂಶುದ್ಧೀನ್ ಕೆ.ಎ.ಯು, ಜುಬೈರ್ ಎಸ್.ಇ, ಕೆ.ಎಂ ಉಸ್ಮಾನ್, ಅಬ್ದುಲ್ಲ ಗುಂಡಿ ಎಸ್.ಇ, ಮೊಯಿದು ಕುಟ್ಟಿ, ಮಹಮ್ಮದ್, ಹಮೀದ್ ಎ ಮೊದಲಾದವರು ಉಪಸ್ಥಿತರಿದ್ದರು.