ಸುಳ್ಯ ಬಿಗ್ 4 ಟೈಲ್ಸ್ ಸಂಸ್ಥೆಯಿಂದ ಜಾತ್ರೋತ್ಸವದ ಅಂಗವಾಗಿ ಆಯೋಜಿಸಿದ್ದ ಮೊಬೈಲ್ ಸ್ಟೇಟಸ್ ವಿಜೇತರಿಗೆ ಬಹುಮಾನ ವಿತರಣೆ

0

ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಕಾರ್ಯಚರಿಸುತ್ತಿರುವ ಬಿಗ್ 4 ಟೈಲ್ಸ್ ಅಂಡ್ ಸ್ಯಾನಿಟರಿ ಸಂಸ್ಥೆಯ ಎಂಟನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಸುಳ್ಯ ಜಾತ್ರೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಮೊಬೈಲ್ ಸ್ಟೇಟಸ್ ಕಾರ್ಯಕ್ರಮದ ಲಕ್ಕಿ ವಿನ್ನರ್ ಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಜ 15 ರಂದು ಬಿಗ್ ಫೋರ್ ಟೈಲ್ಸ್ ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ವಹಿಸಿ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್, ಸುದ್ದಿ ಚಾನೆಲ್ ನಿರೂಪಕಿ ಪೂಜಾ ವಿತೇಶ್ ಕೋಡಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ 8 ನೇ ವರ್ಷದ ಆಧಾರ್ಪಣೆಯ ಪೋಸ್ಟರನ್ನು ಮೊಬೈಲ್ ಫೋನ್ ಗಳಲ್ಲಿ ಸ್ಟೇಟಸ್ ಆಗಿ ಬಳಸಿ 500ಕ್ಕೂ ಹೆಚ್ಚು ವೀವ್ಸ್ ಪಡೆದ ಲಕ್ಕಿ ವಿನ್ನರ್ ಗಳಿಗೆ ಬಹುಮಾನ ವಿತರಣೆ ನಡೆಯಿತು.


ಪ್ರಥಮ ಬಹುಮಾನ ಸಿದ್ದೀಕ್ ಬೋರುಗುಡ್ಡೆ, ದ್ವಿತೀಯ ಬಹುಮಾನವನ್ನು ಶ್ರೀಮತಿ ಪೂಜಾಶ್ರೀ, ಬಹುಮಾನ ಅನ್ವರ್ ಸುಳ್ಯ ಪಡೆದುಕೊಂಡರು.


ಸಂಸ್ಥೆಯ ಮಾಲಕರಾದ ಇಬ್ರಾಹಿಂ ಕದಿಕಡ್ಕ ಮಾತನಾಡಿ ಕಳೆದ ಎಂಟು ವರ್ಷಗಳಿಂದ ಸುಳ್ಳದ ಸರ್ವ ಜನತೆಯ ಪ್ರೀತಿ ಮತ್ತು ವಿಶ್ವಾಸದಿಂದ ನಮ್ಮ ಈ ಸಂಸ್ಥೆಯು ಬೆಳೆದು ಬಂದಿದೆ.ಮುಂದಿನ ದಿನಗಳಲ್ಲಿಯೂ ಕೂಡ ಈ ನಾಡಿನ ಸರ್ವ ಜನತೆಯ ಸಹಕಾರವನ್ನು ಬಯಸುತ್ತೇವೆ ಎಂದು ಹೇಳಿದರು.

ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.