ಚೊಕ್ಕಾಡಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳಿಂದ ಮೃತ ಸಹಪಾಠಿ ಈಶ್ವರ್ ಕುಟುಂಬಕ್ಕೆ ಧನ ಸಹಾಯ

0

ಚೊಕ್ಕಾಡಿ ಪ್ರೌಢಶಾಲೆಯ 1993-94 ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಇತ್ತೀಚಿಗೆ ಆಕಸ್ಮತ್ತಾಗಿ ಮೃತ ಪಟ್ಟ ಸಹಪಾಠಿಯ ಕುಟುಂಬಕ್ಕೆ ಧನ ಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಮೃತಪಟ್ಟ ದುರ್ದೈವಿ ಪೈಲೂರಿನ ಈಶ್ವರ ಗೌಡ ರವರ ಮನೆಗೆ ತೆರಳಿ ಪತ್ನಿ ತಾರಾವತಿ ಯವರಿಗೆ ಹಳೆ ವಿದ್ಯಾರ್ಥಿಗಳು ಸಂಗ್ರಹಿಸಿದ ಸುಮಾರು ರೂ.66 ಸಾವಿರದ ಚೆಕ್ಕನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಿವರಾಮ ಗೌಡ ಮಧುವನ, ಅನಂತ್ ಕುಮಾರ್ ಖಂಡಿಗೆಮೂಲೆ, ಹರ್ಷಕುಮಾರ್ ಮಾಯ್ಪಡ್ಕ, ಸುಬ್ರಾಯ ಪಿಲಿಕಜೆ, ರಾಮಚಂದ್ರ ಆನೆಕಾರ,ಅನುರಾಧ, ಕೃಷ್ಣ ಪ್ರಸಾದ್ ಪಾರೆ,ಹರೀಶ್ ಗುಡ್ಡೆಮನೆ ಮತ್ತಿತರರು ಉಪಸ್ಥಿತರಿದ್ದರು.