ಸುಬ್ರಹ್ಮಣ್ಯ ಮಹಿಳಾ ಸೊಸೈಟಿ ಚುನಾವಣೆ

0

ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯ 17 ಸ್ಥಾನಗಳಿಗೂ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ.

ಆಡಳಿತ ಮಂಡಳಿಗೆ ಜ. 21ರಂದು‌ ಚುನಾವಣೆ ನಡೆಯಬೇಕಿತ್ತು. ನಾಮಪತ್ರ ಸಲ್ಲಿಕೆ ಜ. 9ರಿಂದ ಆರಂಭಗೊಂಡಿತ್ತು. ಒಟ್ಟು 17 ಸ್ಥಾನಗಳಿಗೆ 18 ಅಭ್ಯರ್ಥಿಗಳು ವಿವಿಧ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 8 ಮಂದಿ ಹಾಲಿ ನಿರ್ದೇಶಕರಿದ್ದರು.


ಸುಳ್ಯ ತಾಲೂಕಿನ ಅ ತರಗತಿ ಸದಸ್ಯರ ಸ್ಥಾನದಿಂದ ಹಾಲಿ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್. ರೈ, ಹಾಲಿ ಉಪಾಧ್ಯಕ್ಷೆ ಶ್ರೀಮತಿ ಲೀಲಾ ಮನಮೋಹನ್, ಹಾಲಿ ನಿರ್ದೇಶಕರಾದ ಶ್ರೀಮತಿ ಫೆಮಿದಾ ಸಂಶುದ್ದೀನ್, ಶ್ರೀಮತಿ ಚಂದ್ರಾಕ್ಷಿ ಜೆ. ರೈ, ಶ್ರೀಮತಿ ಸುವರ್ಣಿನಿ ಎನ್.ಎಸ್., ಮಾಜಿ ನಿರ್ದೇಶಕಿ ತಾರಾ ಮಲ್ಲಾರ ಮತ್ತು ನೂತನವಾಗಿ ದಿವ್ಯಕಲಾ ನಂಜೆ ನಾಮಪತ್ರ ಸಲ್ಲಿಸಿದರೆ, ಕಡಬ ತಾಲೂಕಿನಿಂದ ಅ ತರಗತಿಯಿಂದ ಹಾಲಿ ನಿರ್ದೇಶಕರಾದ ಶ್ರೀಮತಿ ಶೋಭಾ ನಲ್ಲೂರಾಯ, ಶ್ರೀಮತಿ ವಿಮಲಾ ರಂಗಯ್ಯ ಮತ್ತು ನೂತನವಾಗಿ ಉದಯಕುಮಾರಿ, ಶುಭದಾ ಎಸ್.ರೈ, ಹಾಲಿ ನಿರ್ದೇಶಕಿ ಶ್ರೀಮತಿ ಸುಜಾತ ಗಣೇಶ್, ಮಾಜಿ ನಿರ್ದೇಶಕಿ ಉಷಾಕಿರಣ ರೈ ಮತ್ತು ಶ್ರೀಮತಿ ತ್ರಿವೇಣಿ ದಾಮ್ಲೆ ನಾಮಪತ್ರ ಸಲ್ಲಿಸಿದ್ದರು. ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಮಾಜಿ ಅಧ್ಯಕ್ಷೆ ಶ್ರೀಮತಿ ಶ್ಯಾಮಲಾ ಮೋಹನ್, ಬಿ ಮೀಸಲು ಕ್ಷೇತ್ರದಿಂದ ಹಾಲಿ ನಿರ್ದೇಶಕಿ ಶ್ರೀಮತಿ ಲೀಲಾವತಿ ಉಪ್ಪಳಿಕೆ, ಪ.ಜಾತಿ ಮೀಸಲು ಕ್ಷೇತ್ರದಿಂದ ಹಾಲಿ ನಿರ್ದೇಶಕಿ ಶ್ರೀಮತಿ ಅನಸೂಯಾ ಬಿ.ಎ. ಮತ್ತು ಪ.ಪಂ. ಮೀಸಲು ಕ್ಷೇತ್ರದಿಂದ ನೂತನವಾಗಿ ಶ್ರೀಮತಿ ಸೌಮ್ಯ ಬಿ.ಕೆ. ನಾಮಪತ್ರ ಸಲ್ಲಿಸಿದ್ದರು. ಸಾಮಾನ್ಯ ಕ್ಷೇತ್ರದಿಂದ ಕಡಬ ತಾಲೂಕಿನಿಂದ ಒಂದು ನಾಮಪತ್ರ ಹೆಚ್ಚುವರಿಯಾಗಿ ಸಲ್ಲಿಕೆಯಾಗಿತ್ತು. ಆದ್ದರಿಂದ 17 ನಿರ್ದೇಶಕರ ಸ್ಥಾನಕ್ಕೆ 18 ನಾಮಪತ್ರಗಳಾಗಿದ್ದವು.

ಜ. 15 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿವಾಗಿತ್ತು. ಅಭ್ಯರ್ಥಿಗಳು ಮಾತುಕತೆ ನಡೆಸಿ ಅಂತಿಮವಾಗಿ ಶುಭದಾ ಎಸ್ ರೈಯವರು ನಾಮಪತ್ರ ಹಿಂದಕ್ಕೆ ಪಡೆದರು. ಒಟ್ಟು 17 ಸ್ಥಾನಗಳಿಗೆ 17 ಅಭ್ಯರ್ಥಿಗಳು ಮಾತ್ರ ಕಣದಲ್ಲುಳಿದುದರಿಂದ ನಿರ್ದೇಶಕರ ಆಯ್ಕೆ ಅವಿರೋಧವಾಗಿ ನಡೆಯಿತು. ಅಧಿಕೃತ ಘೋಷಣೆ ಇನ್ನಷ್ಟೆ ಆಗಬೇಕಾಗಿದೆ.